ಕಡಬ: ಹೆತ್ತ ತಾಯಿಯನ್ನೇ ಕತ್ತಿಯಿಂದ ಕಡಿದ ಮಗ

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಹೆತ್ತ ತಾಯಿಯನ್ನೇ ತನ್ನ ಸ್ವಂತ ಮಗನೋರ್ವ ಕತ್ತಿಯಿಂದ ಕಡಿದು ಗಾಯಗೊಳಿಸಿದ ಅಮಾನವೀಯ ಘಟನೆ ಠಾಣಾ ವ್ಯಾಪ್ತಿಯ ಹಳೆನೇರಂಕಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಕಡಬ ತಾಲೂಕಿನ ಹಳೆನೇರಂಕಿ ಗ್ರಾಮದ ರಬ್ಬರ್ ತೋಟ ನಿವಾಸಿ ಹೊನ್ನಪ್ಪ ಗೌಡ ಎಂಬವರ ಪುತ್ರ ಪರಮೇಶ್ವರ(26) ಎಂಬಾತನೇ ತನ್ನ ತಾಯಿಗೆ ಹಲ್ಲೆ ನಡೆಸಿದ ಆರೋಪಿ. ಮಂಗಳೂರಿನ ಹೋಟೆಲೊಂದರಲ್ಲಿ ಉದ್ಯೋಗದಲ್ಲಿರುವ ಆರೋಪಿಯು ತನ್ನ ತಾಯಿ ಹೊನ್ನಮ್ಮ ಎಂಬಾಕೆಗೆ ಶುಕ್ರವಾರದಂದು ಕತ್ತಿಯಿಂದ ಕಾಲಿಗೆ ಕಡಿದಿದ್ದಲ್ಲದೆ ಕೈಯಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಬಳಿಕ ಊರವರೇ ಸೇರಿಕೊಂಡು ಗಾಯಾಳುವನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Also Read  ದ.ಕ: ಮುಂಗಾರು ಹಿನ್ನೆಲೆ- ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ತಹಶೀಲ್ದಾರ್ ಗೆ ➤ ಡಿಸಿ ಮುಲ್ಲೈ ಮುಹಿಲನ್

error: Content is protected !!
Scroll to Top