ಕಡಬ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ ಹೆಚ್ಚಳ ► ವಾಣಿಜ್ಯ ಕಟ್ಟಡ ಮಾಲಕರಿಂದ ವಿರೋಧ

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಕಡಬ ಗ್ರಾ.ಪಂ.ನಿಂದ 2018-19ನೇ ಸಾಲಿನ ತೆರಿಗೆ ಪರಿಷ್ಕರಿಸಿ ವಾಣಿಜ್ಯ ಕಟ್ಟಡ ಹಾಗೂ ವಾಸ್ತವ್ಯ ಕಟ್ಟಡಕ್ಕೆ ತೆರಿಗೆ ಹೆಚ್ಚಿಸಿದ ಬಗ್ಗೆ ಹೆಚ್ಚುವರಿ ತೆರಿಗೆ ವಿರೋಧಿಸಿ ಸೆ.14ರಂದು ಗ್ರಾ.ಪಂ.ಗೆ ಮನವಿ ನೀಡಿ ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಿಸಬಾರದೆಂದು ಮನವಿ ಮಾಡಲಾಯಿತು.

ಜಿ.ಪ.ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬರ ನೇತೃತ್ವದಲ್ಲಿ ಕಡಬ ವರ್ತಕ ಸಂಘದ ಪದಾಧಿಕಾರಿಗಳು, ಕಟ್ಟಡ ಮಾಲಕರು, ಮನೆ ಮಾಲಕರು ಗ್ರಾ.ಪಂ.ಗೆ ತೆರಳಿ ಕಟ್ಟಡ ತೆರಿಗೆ ಹೆಚ್ಚಿಸಬಾರದೆಂದು ವಿನಂತಿಸಿಕೊಂಡರಲ್ಲದೆ ತಾವು ಪಂಚಾಯತ್‍ನಿಂದ ಈಗಾಗಲೇ ತೆರಿಗೆ ಪರಿಷ್ಕರಣೆಗೆ ಪ್ರಕಟಿಸಿದಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 1993 ರಡಿಯಲ್ಲಿ ನಿಯಮ 119ರಡಿಯಲ್ಲಿ ತೆರಿಗೆ ಪರಿಷ್ಕರಣೆಗೆ ಅವಕಾಶವಿಲ್ಲ ಆದ್ದರಿಂದ ಈ ಪ್ರಕಟನೆಯನ್ನು ರದ್ದುಗೊಳಿಸಿ ಈಗಾಗಲೇ ಇರುವಂತಹ ತೆರಿಗೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದಲ್ಲದೆ ಮನವಿಯನ್ನು ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ ಹಾಗೂ ತಾ.ಪಂ.ಸದಸ್ಯ ಫಝಲ್ ಕೋಡಿಂಬಳರವರ ಸಮ್ಮುಖದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡರಿಗೆ ನೀಡಿ ತೆರಿಗೆ ಹೆಚ್ಚಿಸದಂತೆ ವಿನಂತಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್, ಕಟ್ಟಡ ಮಾಲಕರಾದ ತೋಮ್ಸನ್ ಕೆ.ಟಿ, ಸುಂದರ ಗೌಡ ಮಂಡೆಕರ, ಸತೀಶ್ ನಾಯಕ್, ಶಿವರಾಮ ಶೆಟ್ಟಿ ಕೇಪು, ನಿವೃತ್ತ ಬ್ಯಾಂಕ್ ಮೆನೇಜರ್ ಮಹಮ್ಮದ್ ಕುಂಞ, ಮಹಾಗಣಪತಿ ಕಟ್ಟಡ ಮಾಲಕ ಗುಡ್ಡಪ್ಪ ನಾೈಕ್, ತಿಮ್ಮಪ್ಪ ಕೋಡಿಂಬಾಳ, ಮ್ಯಾಥ್ಯು ಜೋಸೆಫ್ ಕಲ್ಲಂತಡ್ಕ, ಜೋಸ್ ಪ್ರಕಾಶ್ ಕೋಡಿಂಬಾಳ ಇವರ ಮುಂದಾಳತ್ವದಲ್ಲಿ ಮನವಿಯನ್ನು ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡರವರು ಮುಂದಿನ ಸಾಮಾನ್ಯ ಸಭೆಯಲ್ಲಿ ತಮ್ಮ ಅರ್ಜಿಯನ್ನು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Also Read  ಮಂಗಳೂರು: ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ರಕ್ಷಣೆ ➤ 8 ಮಂದಿಯನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

error: Content is protected !!
Scroll to Top