ಮರ್ಧಾಳ: ಜೀಪ್ ಬೈಕ್ ಢಿಕ್ಕಿ ► ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಜೀಪು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಗುರುವಾರದಂದು ಮರ್ಧಾಳದಲ್ಲಿ ನಡೆದಿದೆ.

ಗಾಯಗೊಂಡ ಬೈಕ್ ಸವಾರನನ್ನು ಸುಂಕದಕಟ್ಟೆ ಮೂಜೂರು ನಿವಾಸಿ ತುಕಾರಾಮ್ ಎಂದು ಗುರುತಿಸಲಾಗಿದೆ. ಕಡಬ ಕೇವಳ ನಿವಾಸಿಯೋರ್ವರು ಚಲಾಯಿಸುತ್ತಿದ್ದ ಜೀಪ್ ಹಾಗೂ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದೆ. ಗಾಯಾಳುವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ‌ನೆಲ್ಯಾಡಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Also Read  Benefits of Data Room Due Diligence

error: Content is protected !!
Scroll to Top