►► Big Breaking ಆಲಂಕಾರು: ಮಗನಿಗೆ ಕತ್ತಿಯಿಂದ ಕಡಿದ ತಂದೆ ► ಬಳಿಕ ಮರ್ಮಾಂಗ ಕಡಿದು ಕುತ್ತಿಗೆ ಸೀಳಿ ತಾನೂ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ತನ್ನ ಮಗನಿಗೆ ಕತ್ತಿಯನ್ನು ಕಡಿದು ಬಳಿಕ ತನ್ನ ಕುತ್ತಿಗೆ ಹಾಗೂ ಮರ್ಮಾಂಗಕ್ಕೆ ಚಾಕುವಿನಿಂದ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ಆಲಂಕಾರಿನಲ್ಲಿ ನಡೆದಿದೆ.

ಆಲಂಕಾರು ಗ್ರಾಮದ ಪಟ್ಟೆಮಜಲು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಪುತ್ರ ರಾಜೀವ್ ಪೂಜಾರಿ (45) ತನ್ನ ಪುತ್ರ ರತನ್ ಗೆ ಕತ್ತಿಯಿಂದ ಕಡಿದಿದ್ದು, ಬಳಿಕ ಕತ್ತಿಯಿಂದ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಯಾಳು ರತನ್ ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬೆಳ್ತಂಗಡಿ: ನೇತ್ರಾವತಿ ಸ್ಥಾನಘಟ್ಟದಲ್ಲಿ ಸಾಬೂನ್, ಶಾಂಪೂ ಬಳಕೆ ನಿಷೇಧ

error: Content is protected !!
Scroll to Top