ಕಡಬ ಪೇಟೆಯಲ್ಲೇ ತೂಫಾನ್ ಚಾಲಕರಿಬ್ಬರ ನಡುವೆ ಹೊಡೆದಾಟ ► ಓರ್ವ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಸೆ.11. ತೂಫಾನ್ ಚಾಲಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು ಓರ್ವ ಗಾಯಗೊಂಡ ಘಟನೆ ಕಡಬದಲ್ಲಿ ಮಂಗಳವಾರದಂದು ನಡೆದಿದೆ.

ಗಾಯಗೊಂಡ ಚಾಲಕನನ್ನು ಜಬ್ಬಾರ್ ಎಂದು ಗುರುತಿಸಲಾಗಿದೆ. ಜಬ್ಬಾರ್ ಹಾಗೂ ಅಬ್ದುಲ್ ರಹಿಮಾನ್ ನಡುವೆ ಕಡಬ – ಉಪ್ಪಿನಂಗಡಿ ಕ್ಯೂ ವಿಚಾರದಲ್ಲಿ ಉಂಟಾದ ಮಾತು ಕೈ – ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಆ ಕ್ಷಣದಲ್ಲಿ ಜಬ್ಬಾರ್ ತನ್ನ ವಾಹನದಿಂದ ಚೈನನ್ನು ತೆಗೆದುಕೊಂಡು ಬಂದು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಲ್ಲೆಯ ದೃಶ್ಯವನ್ನು ಗೃಹರಕ್ಷಕ ದಳದ ಸಿಬ್ಬಂದಿಯೋರ್ವರು ವೀಡಿಯೋ ಮಾಡಿದ್ದಾರೆ. ಜಬ್ಬಾರ್ ನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಬ್ದುಲ್ ರಹಿಮಾನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Also Read  ಕಡಬ: ಹಿಂದೂ ಸಾಮ್ರಾಜ್ಯೋತ್ಸವ ದಿನಾಚರಣೆ

error: Content is protected !!
Scroll to Top