ರಾಜಕೀಯ ಪಕ್ಷಗಳ ಬಂದ್ ಕರೆ ಸರಕಾರಿ ಕಛೇರಿಗಳಿಗೂ ಅನ್ವಯವೇ..? ► ಕಛೇರಿಗೆ ಬೀಗ ಜಡಿದ ಬಿಳಿನೆಲೆ ಮತ್ತು ನೂಜಿಬಾಳ್ತಿಲ ಗ್ರಾ.ಪಂ. ಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಭಾರತ್ ಬಂದ್ ಗೆ ಬಿಳಿನೆಲೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಛೇರಿಯನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದು, ವಿಚಾರ ತಿಳಿದ ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಂತೆ ವಾಪಾಸ್ ತೆರೆದ ಘಟನೆ ಸೋಮವಾರದಂದು ನಡೆದಿದೆ.

ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಪಂಚಾಯತ್ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿ ಪಂಚಾಯತನ್ನು ಬಂದ್ ಮಾಡಿಸಿದ್ದಾರೆ. ಕೊಳೆ ರೋಗದ ಆರ್ಜಿ ನೀಡಲು ಬಂದ ಕೆಲ ಗ್ರಾಮಸ್ಥರು ವಾಪಾಸು ಹೋಗಿದ್ದು ಬಳಿಕ ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಂತೆ ಪಂಚಾಯತ್ ತೆರೆದುಕೊಂಡಿದೆ ಎಂದು ಬಿಜೆಪಿ ಮುಖಂಡ ವಾಡ್ಯಪ್ಪ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಕೆಪಿಸಿಸಿ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಕಡಬದ ಅನಿಲ್ ವರ್ಗೀಸ್ ನೇಮಕ

ಈ ನಡುವೆ ನೂಜಿಬಾಳ್ತಿಲ ಗ್ರಾ.ಪಂ. ಕೂಡಾ ಬಂದ್ ಆಗಿರುವ ವಿಲಕ್ಷಣ ಘಟನೆ ನಡೆದಿದೆ. ಬೆಳಿಗ್ಗೆ ಎಂದಿನಂತೆ ಕಛೇರಿಯನ್ನು ತೆರೆಯಲಾಗಿದ್ದರೂ, ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮಾಡಿದ ಮನವಿ ಮೇರೆಗೆ ಸರಕಾರಿ ಕಛೇರಿ ಎನ್ನುವುದನ್ನು ಮರೆತು ಸಿಬ್ಬಂದಿಗಳು ಬೀಗ ಜಡಿದು ತೆರಳಿದ್ದಾರೆ.

error: Content is protected !!
Scroll to Top