ದೇಶದಲ್ಲಿ ದಿನಬಳಕೆಯ ವಸ್ತುಗಳು, ಔಷಧಿಗಳು ಕೈಗೆಟುಕುವ ದರದಲ್ಲಿದೆ ► ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ‘ಭಾರತ ಬಂದ್’ ಹಾಸ್ಯಾಸ್ಪದ: ಕೃಷ್ಣ ಶೆಟ್ಟಿ ಕಡಬ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ರಾಷ್ಟ್ರದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆಯು ಸಂಪೂರ್ಣ ಕಡಿಮೆಯಾಗಿದ್ದರೂ ಪೆಟ್ರೋಲ್ ಬೆಲೆ ಏರಿಕೆಯ ವಿರುದ್ಧ ಮಾತ್ರ ಕಾಂಗ್ರೆಸ್ ಭಾರತ ಬಂದ್ ಗೆ ಕರೆ ನೀಡಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

ಪೆಟ್ರೋಲ್ ಬೆಲೆಯು ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗಲೂ 80 ರ ಗಡಿಯನ್ನು ದಾಟಿತ್ತು. ಆ ಸಂದರ್ಭದಲ್ಲಿ ದಿನಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರಿದ್ದವಾದರೂ ಇದೀಗ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಔಷದೀಯ ವಸ್ತುಗಳ ದರದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದ್ದು, ಹೀಗಿದ್ದರೂ ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಮಾಡಿರುವ ಬಂದ್ ಸರಿಯಲ್ಲ ಎಂದರು‌. ಈ ಹಿಂದೆ ಬಿಜೆಪಿಯು ಬಂದ್ ಗೆ ಕರೆ ಕೊಟ್ಟಾಗ ಕರೆ ಕೊಟ್ಟವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಕಾಂಗ್ರೆಸ್ ನಾಯಕರು ಹೇಳಿಕೆ ಕೊಟ್ಟಿದ್ದರು‌. ಇದೀಗ ಅಂತಹವರೇ ಬಂದ್ ಗೆ ಕರೆ ಕೊಡುತ್ತಿರುವುದು‌ ನಾಚಿಕೆಗೇಡು ಎಂದು ಲೇವಡಿ ಮಾಡಿದರು.

Also Read  ಶ್ರೀಕೃಷ್ಣ ಮಠದಲ್ಲಿ ಸರಳ ಕೃಷ್ಣಾಷ್ಟಮಿ ➤ ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ

error: Content is protected !!
Scroll to Top