ಬಂಟ್ವಾಳ: ಭಾರತ ಬಂದ್ ಹಿನ್ನೆಲೆ ► ಬಸ್ ಗೆ ಕಲ್ಲು ತೂರಾಟ – ಟಯರ್ ಗೆ ಬೆಂಕಿ ಹಾಕಿ ರಸ್ತೆ ತಡೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.10. ಪೆಟ್ರೋಲ್ – ಡೀಸೆಲ್‌ ದರ ಏರಿಕೆ ಖಂಡಿಸಿ ಕಾಂಗ್ರೇಸ್ ಕರೆ ನೀಡಿರುವ ಬಂದ್ ಗೆ ಮಂಗಳೂರು ಹಲವೆಡೆ ವರ್ತಕರು ಬಂದ್ ಮಾಡಿ‌ ಬೆಂಬಲ ಸೂಚಿಸಿದರೆ, ಬಂಟ್ವಾಳದಲ್ಲಿಂದು ಎರಡು ಕೆಎಸ್ಸಾರ್ಟಿಸಿ ಬಸ್ ಗಳಿಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಬಂಟ್ವಾಳದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬಸ್ ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಕಲ್ಲಡ್ಕ, ಮಾಣಿ ಬಳಿ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಾಕಿ ರಸ್ತೆಯಲ್ಲಿಡಲಾಗಿದೆ. ಪೋಲಿಸರು ಆಗಮಿಸಿ ಟಯರ್ ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಲ್ಲಡ್ಕದಂತಹ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Also Read  ಶವಯಾತ್ರೆಯಲ್ಲಿನ ಕಲ್ಲುತೂರಾಟ ಪೂರ್ವಯೋಜಿತ ಕೃತ್ಯವೇ...? ► ಸಂಶಯಕ್ಕೆ ಕಾರಣವಾದ ವೀಡಿಯೋ ಇದೀಗ ವೈರಲ್

error: Content is protected !!
Scroll to Top