ಬಂದ್ ಗೆ ಕರೆ ನೀಡಿದವರು ದೇಶ ದ್ರೋಹಿಗಳು: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ► ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕಿದರೆ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುವೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.09. ಬಂದ್​ಗೆ ಕರೆ ನೀಡಿದವರು ದೇಶ ವಿರೋಧಿಗಳಾಗಿದ್ದು, ಬಂದ್​ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರೇ ಜವಾಬ್ದಾರರಾಗಿರುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಅವರು ಭಾನುವಾರದಂದು ಸುದ್ದಿಗಾರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ಪೆಟ್ರೋಲ್ ದರ ಏರಿಕೆಯ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ. ಬಂದ್​ಗೆ ಕರೆ ನೀಡುವುದು ಸುಲಭವಾದರೂ, ಬಂದ್ ನಿಂದ ಆಗುವ ನಷ್ಟಕ್ಕೆ ಕರೆ ಕೊಟ್ಟವರೇ ಜವಾಬ್ದಾರರಾಗಿರುತ್ತಾರೆ. ಕಾಂಗ್ರೆಸ್ ಪಕ್ಷವು ತಪ್ಪು ಮಾಡುತ್ತಿದ್ದು, ಹೀಗೆ ಮುಂದುವರಿದರೆ ಒಂದು ದಿನಾನೂ ಸರ್ಕಾರ ಕಟ್ಟೋಕೆ ಸಾಧ್ಯವಿಲ್ಲ. ಪೆಟ್ರೋಲ್ ಅಕ್ರಮ ದಾಸ್ತಾನು ತಡೆಗಟ್ಟಿದರೆ ಬೆಲೆಯೇರಿಕೆ ಕಡಿಮೆಯಾಗುತ್ತದೆ ಎಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿದರೆ ಮತ್ತೆ ಸ್ಪರ್ಧಿಸುತ್ತೇನೆ ಎಂದು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Also Read  ಕೊರೋನಾದಿಂದ ಮೃತಪಟ್ಟ ಕಡಬದ ವ್ಯಕ್ತಿ ➤ ಪಿಎಫ್ಐ ಕಾರ್ಯಕರ್ತರಿಂದ ಅಂತ್ಯಕ್ರಿಯೆ

error: Content is protected !!
Scroll to Top