ಸುಬ್ರಹ್ಮಣ್ಯ: ಒಬ್ಬಂಟಿಯಾಗಿದ್ದ ಜೀವನ ಸಾಗಿಸುತ್ತಿದ್ದ ವ್ಯಕ್ತಿಯ ಕೊಲೆ ► ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.08. ಒಬ್ಬಂಟಿಯಾಗಿ ಜೀವನ‌ ಸಾಗಿಸುತ್ತಿದ್ದ ವ್ಯಕ್ತಿಯೋರ್ವರನ್ನು ಮನೆಯ ಕೊಠಡಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಅವರ ಮೃತದೇಹವು ಶನಿವಾರದಂದು ಕಂಡು ಬಂದಿದೆ.

ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ಲಾರು ನಿವಾಸಿ ಸುಬ್ರಹ್ಮಣ್ಯ ಕೆ.(58) ಕೊಲೆಗೀಡಾದ ದುರ್ದೈವಿ. 2007 ರಲ್ಲಿ ಹೆಂಡತಿಯನ್ನು ತೊರೆದಿದ್ದ ಇವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸುಬ್ರಹ್ಮಣ್ಯರು ಕೆಲವು ದಿನಗಳಿಂದ ಕಾಣದೆ ಇದ್ದುದರಿಂದ ಅನುಮಾನಗೊಂಡ ನೆರೆಯ ನಿವಾಸಿ ರಾಮಚಂದ್ರ ಎಂಬವರು ಮೃತರ ಸಹೋದರನಿಗೆ ಕರೆ‌ಮಾಡಿ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಂದು ಮನೆಗೆ ಆಗಮಿಸಿದ ಅವರ ಸಹೋದರನಿಗೆ ಮನೆಯೊಳಗಿಂದ ದುರ್ವಾಸನೆ ಬಂದಿದ್ದು, ಶನಿವಾರದಂದು ಸ್ಥಳೀಯರ ನೆರವಿನೊಂದಿಗೆ ಮನೆಯೊಳಗೆ ಹೊಕ್ಕಾಗ ಕೊಲೆಗೈದ ಸ್ಥಿತಿಯಲ್ಲಿ ಕೊಳೆತ ಮೃತದೇಹ ಕಂಡುಬಂದಿದೆ.

Also Read  ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್

ಈ ಬಗ್ಗೆ ಮೃತರ ಸಹೋದರ ರಾಧಾಕೃಷ್ಣ ಕೆ. ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top