ಕಲ್ಲಾರೆ: ಹೊಂಡಕ್ಕೆ ಬಿದ್ದ ಬೈಕ್ ► ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.06. ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಹೊಂಡಕ್ಕೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಇಲ್ಲಿನ ಕಲ್ಲಾರೆ ಸಮೀಪ ನಡೆದಿದೆ.

ಮೃತ ಸವಾರನನ್ನು ಪುತ್ತೂರು ತಾಲೂಕಿನ ಕೊಕ್ಕಡ ಸಮೀಪದ ಹಲ್ಲಿಂಗೇರಿ ನಿವಾಸಿ ಉಮೇಶ್ ಪೂಜಾರಿ(42) ಎಂದು ಗುರುತಿಸಲಾಗಿದೆ. ಉಮೇಶ್ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಲ್ಲಾರೆ ಸಮೀಪ ರಸ್ತೆ ಬದಿಯ ಆಳವಾದ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ,ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅರಂತೋಡು -ತೊಡಿಕಾನ ಸಹಕಾರಿ ಸಂಘಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ

error: Content is protected !!