ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ಸೆಪ್ಟೆಂಬರ್ 08 ರಂದು ದಕ್ಷಿಣ ಕನ್ನಡದಲ್ಲಿ ಶಾಲಾ – ಕಾಲೇಜುಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.06. ಕೊಯಿಲು ಹಬ್ಬ/ಮರಿಯ ಜಯಂತಿ ಹಬ್ಬದ ನಿಮಿತ್ತ ಸೆ.08 ರಂದು ಶಾಲಾ-ಕಾಲೇಜು ಸಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವಂತೆ ದ.ಕ. ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಕರಾವಳಿಯಲ್ಲಿ ಕ್ರೈಸ್ತರು ಪ್ರತೀ ವರ್ಷ ಸೆ.08 ರಂದು ಕೊಯಿಲು ಹಬ್ಬ/ಮರಿಯ ಜಯಂತಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಮಂಗಳೂರಿನ ಕೆಥೋಲಿಕ್ ಸಭಾ ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿ ಪ್ರತೀ ವರ್ಷ ಸ್ಥಳೀಯ ಹಾಗೂ ಅಗತ್ಯಕ್ಕನುಗುಣವಾಗಿ ವರ್ಷದಲ್ಲಿ 4 ದಿನಗಳ ರಜೆ ನೀಡಲು ವಿವೇಚನಾಧಿಕಾರವಿದ್ದು, ಅದರಂತೆ ಈ ವಿವೇಚನಾಧಿಕಾರವನ್ನು ಬಳಸಿಕೊಂಡು ರಜೆ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Also Read  ಬಜ್ಪೆಯ ಪೊರ್ಕೋಡಿಯಲ್ಲಿ ದಲಿತ ಮುಸ್ಲಿಂ ಸ್ನೇಹ ಸಮ್ಮಿಲನ

error: Content is protected !!
Scroll to Top