ಆಲಂಕಾರು ಸರಕಾರಿ ಶಾಲೆಯಲ್ಲಿ ಕಳ್ಳರ ಕೈಚಳಕ ► ಮೈಕ್ ಸೆಟ್, ಪುಸ್ತಕಗಳ ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಶಾಲಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಮೈಕ್ ಸೆಟ್ ಹಾಗೂ ಪುಸ್ತಕಗಳನ್ನು ಹೊತ್ತೊಯ್ದ ಘಟನೆ ಆಲಂಕಾರಿನಲ್ಲಿ ಸೆಪ್ಟೆಂಬರ್ 04 ಸಂಜೆಯಿಂದ ಸೆಪ್ಟೆಂಬರ್ 06 ಬೆಳಗ್ಗಿನ ನಡುವೆ ನಡೆದಿದೆ.

ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಮೈಕ್ ಸೆಟ್ ನ ಆ್ಯಂಪ್, ಮೈಕ್ರೋಫೋನ್, ಕೇಬಲ್ ಹಾಗೂ ಸುಮಾರು 200 ರಷ್ಟು ಪುಸ್ತಕಗಳನ್ನು ಹೊತ್ತೊಯ್ದಿದ್ದಾರೆ. ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಾಲೆಗೆ ರಜೆ ಇದ್ದುದರಿಂದ ಸೆಪ್ಟೆಂಬರ್ 06 ರಂದು ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ನಿಂಗರಾಜುರವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

error: Content is protected !!
Scroll to Top