ಕೊೈಲ ತುಂಬೆತ್ತಡ್ಕದಲ್ಲಿ ಅಪಾಯಕಾರಿ ವಿದ್ಯುತ್ ಪರಿವರ್ತಕ ► ಕುರುಡಾಗಿ ಕುಳಿತಿರುವ ಮೆಸ್ಕಾಂ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಕಡಬ ತಾಲೂಕು ಕೊೈಲ ಗ್ರಾಮದ ತುಂಬೆತ್ತಡ್ಕ ಎಂಬಲ್ಲಿ ವಿದ್ಯುತ್ ಪರಿವರ್ತಕವೊಂದನ್ನು ಒಂದೇ ಕಂಬಕ್ಕೆ ಅಳವಡಿಸಿದ ಪರಿಣಾಮ ಕಂಬ ಬಾಗಿಕೊಂಡಿದ್ದು ಅಪಾಯ ಎದುರಿಸುವಂತಾಗಿದೆ. ಸುಮಾರು 20 ಮನೆಗಳಿಗೆ ಮತ್ತು ಕೃಷಿ ಪಂಪು ಸೆಟ್ಟುಗಳಿಗೆ ವಿದ್ಯುತ್ ಒದಗಿಸಲು ಸುಮಾರು ಎಂಟು ವರ್ಷಗಳ ಹಿಂದೆ ಅಳವಡಿಸಲಾದ ವಿದ್ಯುತ್ ಪರವರ್ತಕವನ್ನು ಅಪಾಯಕಾರಿಯಾಗಿ ಅಳವಡಿಸಲಾಗಿದೆ.

ಸಬಳೂರು, ರಾಮಕುಂಜ, ಉಪ್ಪಿನಂಗಡಿ, ಪುತ್ತೂರು ಭಾಗಕ್ಕೆ ತೆರಳುವ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪರಿವರ್ತಕದ ಸಮೀಪದಲ್ಲಿನ ಸಾರ್ವಜನಿಕ ರಸ್ತೆಯನ್ನು ಅವಲಂಬಿಸಿದ್ದಾರೆ. ಜನ ಓಡಾಟವಿರುವ ಜಾಗದಲ್ಲಿ ಇಷ್ಟೊಂದು ಅಪಾಯಕಾರಿಯಾಗಿರುವ ವಿದ್ಯುತ್ ಪರಿವರ್ತಕದ ಬಗ್ಗೆ ಸ್ಥಳಿಯರು ಮೆಸ್ಕಾಂ ಇಲಾಖೆಗೆ ದೂರಿಕೊಂಡರೂ ಯಾವೂದೆ ಪ್ರಯೋಜನವಾಗಿಲ್ಲ. ವಿದ್ಯುತ್ ಪರಿವರ್ತಕ ಹೊತ್ತ ಈ ಕಂಬದಿಂದ ಭೂಮಿಗೆ ಆದಾರವಾಗಿರುವ ತಂತಿಗಳು ತುಕ್ಕು ಹಿಡಿದು ತುಂಡಾಗಿದೆ. ಹಾಗಾಗಿ ಇನ್ನಷ್ಟು ಅಪಾಯ ತಂದೊಡ್ಡುತ್ತಿದೆ. ಈ ವಿದ್ಯುತ್ ಪರಿವರ್ತಕದ ಗ್ರಾಹಕರು ವರ್ಷದಲ್ಲಿ ಎರಡು ಬಾರಿ ಸ್ವಯಂಪ್ರೇರಿತರಾಗಿ ವಿದ್ಯುತ್ ತಂತಿಗಳಿಗೆ ಅಡಚನೆಯಾಗುವ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತಾರೆ. ಮೆಸ್ಕಾಂ ಇಲಾಖೆಗೆ ಇಷ್ಟೊಂದು ಸಹಕರಿಸುತ್ತಿದ್ದರೂ ಇಲಾಖೆ ಬೇಜವ್ದಾರಿಯಿಂದ ವರ್ತಿಸುತ್ತಿರುವುದು ಖೇದಕರ ಎನ್ನುತ್ತಾರೆ ಸ್ಥಳಿಯರು.

Also Read  ಮುಂದುವರಿದ ಕೊರೋನಾ ಅಟ್ಟಹಾಸ ➤ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಈ ಬಗ್ಗೆ ಮೆಸ್ಕಾಂ ಲೈನ್‍ಮ್ಯಾನ್‍ಗಳು, ಸ್ಥಳಿಯರು ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
ರಾಜೇಶ್ , ಎಇ , ಮೆಸ್ಕಾಂ ಉಪ್ಪಿನಂಗಡಿ ಸಬ್‍ಸ್ಟ್ಟೆಷನ್

error: Content is protected !!
Scroll to Top