ಹಳೆನೇರೆಂಕಿ ಮೊಸರು ಕುಡಿಕೆ ಉತ್ಸವ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಕಡಬ ತಾಲೂಕು ಹಳೆನೇರೆಂಕಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಳೆನೇರೆಂಕಿಯಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು. ಬೆಳಿಗ್ಗೆ ಹಳೆನೇರೆಂಕಿ ಆರಟಿಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಸಾರ್ವಜನಿಕರಿಗೆ, ಅಂಗನವಾಡಿ ಪುಟಾಣಿಗಳಿಗೆ ವಿದ್ಯಾರ್ಥಿಗಳಿಗೆ ನಡೆದ ವಿವಿದ ಸ್ಪರ್ದೆಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಾಜಿ ಗೌರವಾದ್ಯಕ್ಷ ಆಶೋಕ್ ಬರೆಂಬೆಟ್ಟು ಚಾಲನೆ ನೀಡಿದರು.

ಸಾಯಂಕಾಲ ನಡೆದ ಸಮರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ್ ಜಿಲ್ಲಾ ಪ್ರಮುಖ್ ಗೋಪಾಲಕೃಷ್ಣ ಭಟ್ ದಾರ್ಮಿಕ ಉಪನ್ಯಾಸ ನೀಡಿದರು. ಸಮಿತಿ ಗೌರವಾದ್ಯಕ್ಷ ಗೋಪಾಲಕೃಷ್ಣ ಪಾತೃಮಾಡಿ ಅದ್ಯಕ್ಷತೆ ವಹಿಸಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿಗಳು ಶ್ರೀ ಕೃಷ್ಣ ವೇಷ ದರಿಸಿದ್ದರು. ಈ ಸಂದರ್ಭದಲ್ಲಿ ವಿಜೇತ ಸ್ಪರ್ದಾಳುಗಳಿಗೆ ಬಹುಮಾನ ವಿತರಣೆ , ಕೃಷ್ಣ ವೇಷದಾರಿ ಪುಟಾಣಿಗಳನ್ನು ಗೌರವಿಸಲಾಯಿತು. ಶರತ್ ಸ್ವಾಗತಿಸಿದರು. ಕುಶಾಲಪ್ಪ ಮುಳಿಮಜಲು ವಂದಿಸಿದರು. ಮಹೇಶ್ ಬಿ ನಿರೂಪಿಸಿದರು.

Also Read  100 ಸಿಸಿಯ ಲಿಸ್ಟಲ್ಲಿ ನಿಮ್ಮ ವಾಹನ ರಿಜಿಸ್ಟರ್ ಆಗಿದೆಯೇ..??? ►ನಿಮಗೆ ಈ ಆದೇಶ ಅನ್ವಯಿಸುತ್ತಾ ತಿಳಿದುಕೊಳ್ಳಿ..!!!

error: Content is protected !!
Scroll to Top