ಅಂತೂ ಇಂತೂ ಶಿರಾಡಿ ಘಾಟ್ ಲಘು ವಾಹನ ಸಂಚಾರಕ್ಕೆ ಅಸ್ತು ► ಯಾವೆಲ್ಲಾ ವಾಹನಗಳು ಸಂಚರಿಸಬಹುದೆಂದು ಗೊತ್ತೇ..?

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.05. ಅಂತೂ ಇಂತೂ ರಸ್ತೆ ತಡೆಯಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದ್ದ ಮಂಗಳೂರು-ಹಾಸನ ಮಾರ್ಗದ ಶಿರಾಡಿ ಘಾಟ್ ರಸ್ತೆಯು ಬುಧವಾರದಿಂದ ಲಘು ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್ ಬಂದ್ ಆಗಿದ್ದರಿಂದ ಮಂಗಳೂರಿನಿಂದ ರಾಜ್ಯ ರಾಜಧಾನಿಯ ಸಂಪರ್ಕಕ್ಕೆ ಚಾರ್ಮಾಡಿ ಘಾಟ್ ರಸ್ತೆಯನ್ನೇ ಅವಲಂಬಿಸಬೇಕಾಗಿತ್ತು. ಇದೀಗ ಬೆಂಗಳೂರು – ಮಂಗಳೂರು ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯಲ್ಲಿ ಬೈಕ್, ಕಾರು ಹಾಗೂ ಟೆಂಪೋ ಟ್ರಾವೆಲರ್ ನಂತಹ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಪ್ರಯಾಣಿಕರಿಗೆ ಸುತ್ತು ಬಳಸಿ ಪ್ರಯಾಣಿಸುವುದು ತಪ್ಪಿದಂತಾಗಿದೆ.

Also Read  ರೈಸ್ ಮಿಲ್ ನಲ್ಲಿ ವಿದ್ಯುತ್ ಅವಘಡ ➤ ಯುವಕ‌ ಸಾವು!

error: Content is protected !!
Scroll to Top