ಎಡಮಂಗಲ: ಅಕ್ರಮ ಜಾನುವಾರು ಸಾಗಾಟ ► ಓರ್ವ ಆರೋಪಿಯ ಬಂಧನ, ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.05. ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಬೆಳ್ಳಾರೆ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇಬ್ಬರು ಪರಾರಿಯಾದ ಘಟನೆ ಠಾಣಾ ವ್ಯಾಪ್ತಿಯ ಎಡಮಂಗಲ ಎಂಬಲ್ಲಿ ಮಂಗಳವಾರ ಸಂಜೆ‌ ನಡೆದಿದೆ.

ಬಂಧಿತ ಆರೋಪಿಯನ್ನು ಪಿಕಪ್ ಚಾಲಕ ಸುಳ್ಯ ತಾಲೂಕಿನ ಮುಪ್ಪೇರಿಯ ಗ್ರಾಮದ ಕಾಪಡ್ಕ ನಿವಾಸಿ ಗಿರಿಧರ ಗೌಡ ಎಂಬವರ ಪುತ್ರ ರಾಧಾಕೃಷ್ಣ ಕೆ. (36) ಎಂದು ಗುರುತಿಸಲಾಗಿದೆ. ಮಹಮ್ಮದ್ ಯಾನೆ ಮೈಮು ಹಾಗೂ ಇನ್ನೋರ್ವ ಓಡಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ಮರ್ದುರಡ್ಕ ಪಟ್ಟದಮೂಲೆ ಎಂಬಲ್ಲಿ ಮರ್ದುರಡ್ಕ ಕಲ್ಲೆಂಬಿ ರಸ್ತೆಯಲ್ಲಿ ಎರಡು ಜಾನುವಾರುಗಳನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ನಲ್ಲಿ ಸಾಗಿಸುತ್ತಿದ್ದಾಗ ವಾಹನ ತಪಾಸಣೆ ನಡೆಸಿದ ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ ಹಾಗೂ ಸಿಬ್ಬಂದಿಗಳು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ವಿವಿಧ ಕಡೆ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ► ಆಲಂಕಾರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಆಶ್ಲೇಷ್ ಬಾಕಿಲ

error: Content is protected !!
Scroll to Top