ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲದ ಮತ್ತು ಮಳೆ ಕಡಿಮೆಯಾಗದ ಹಿನ್ನೆಲೆ ► ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಸೆ.07 ರ ವರೆಗೆ ನಿಷೇಧ ಮುಂದುವರಿಕೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಸೆ.01. ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಆಗಮನ ಹಾಗೂ ವಾಸ್ತವ್ಯ‌ ನಿಷೇಧವನ್ನು ಸೆಪ್ಟೆಂಬರ್ 07 ರವರೆಗೆ ವಿಸ್ತರಿಸಿ‌ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

ಕೊಡಗು ಜಿಲ್ಲೆಯು ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಪ್ರವಾಸಿಗರು ಬಂದು ವಾಸ್ತವ್ಯ‌ ಮಾಡುವಂತಿಲ್ಲ ಎಂದು ಆಗಸ್ಟ್ 31 ರವರೆಗೆ ನಿಷೇಧ ಹೇರಲಾಗಿತ್ತು. ಇದೀಗ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ ಹಾಗೂ ಮಳೆ ಕಡಿಮೆಯಾಗದ ಕಾರಣ ಸೆಪ್ಟೆಂಬರ್ 07 ರವರೆಗೆ ಪ್ರವಾಸಿಗರ ಆಗಮನ ಹಾಗೂ ವಾಸ್ತವ್ಯ‌ ನಿಷೇಧ ಆದೇಶವನ್ನು ವಿಸ್ತರಿಸಲಾಗಿದೆ.

Also Read  ಮಡಿಕೇರಿಯಲ್ಲಿ ಏಕಾಏಕಿ ಕುಸಿದು ಬಿದ್ದ ಮನೆ ಗೋಡೆ ➤ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರು

error: Content is protected !!
Scroll to Top