ಕಲ್ಲಡ್ಕ: ಹಣಕಾಸಿನ ವಿಚಾರದಲ್ಲಿ ಯುವಕರಿಬ್ಬರ ನಡುವೆ ಗಲಾಟೆ ► ಕಲ್ಲಡ್ಕದಲ್ಲಿ ಗಲಭೆಯೆಂದು ವಾಟ್ಸ್ಅಪ್ ನಲ್ಲಿ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.01. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಯುವಕರಿಬ್ಬರ ನಡುವೆ ಶುಕ್ರವಾರ ರಾತ್ರಿ ಕಲ್ಲಡ್ಕದಲ್ಲಿ ಗಲಾಟೆ ನಡೆದಿದ್ದು, ಇದನ್ನೇ ದೊಡ್ಡದಾಗಿ ಬಿಂಬಿಸಿದ ಕೆಲವು ಕಿಡಿಗೇಡಿಗಳು ಕಲ್ಲಡ್ಕದಲ್ಲಿ ಗಲಭೆ ಆರಂಭವಾಗಿದ್ದು, ಆ ಕಡೆಗೆ ಹೋಗುವವರು ಎಚ್ಚರಿಕೆಯಿಂದ ಇರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ.

ಕಲ್ಲಡ್ಕದಲ್ಲಿ ಸೆಲೂನ್ ನಡೆಸುತ್ತಿರುವ ತಮಿಳುನಾಡು ‌ಮೂಲದ ಸತೀಶ್ ಕಲ್ಲಡ್ಕ ನಿವಾಸಿ ಖಲೀಲ್ ಗೆ ಹಣ ನೀಡಿದ್ದು, ಆದರೆ ಖಲೀಲ್ ಹಣವನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದ ಬಗ್ಗೆ ಬಂಟ್ವಾಳ ನಗರ ಠಾಣೆಗೆ ಸತೀಶ್ ದೂರು ನೀಡಿದ್ದರು. ಆದರೆ ಶುಕ್ರವಾರ ರಾತ್ರಿ 9 ಗಂಟೆಯ ವೇಳೆಗೆ ಸೆಲೂನ್ ಗೆ ನುಗ್ಗಿದ ಆರೋಪಿ ಖಲೀಲ್ ಸತೀಶ ಗೆ ಹಲ್ಲೆ ನಡೆಸಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ನಗರ ಠಾಣೆ ಪೊಲೀಸರು ಆರೋಪಿ ಖಲೀಲ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೇ ದೊಡ್ಡದಾಗಿ ವೈಭವೀಕರಿಸಿದ ಕಿಡಿಗೇಡಿಗಳು ಕಲ್ಲಡ್ಕದಲ್ಲಿ ಗಲಭೆ ಆರಂಭವಾಗಿದೆ ಎಂದೇ ಹರಿಯಬಿಟ್ಟಿದ್ದಾರೆ. ವಾಸ್ತವಾಂಶ ತಿಳಿಯದೆ ಹಲವರು ಇದನ್ನು ಫಾರ್ವರ್ಡ್ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಕಲ್ಲಡ್ಕ ಪರಿಸರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Also Read  ಮಹಿಳೆಯೋರ್ವರ 4 ಪವನ್‌ ತೂಕದ ಚಿನ್ನದ ಕರಿಮಣಿಸರ ಎಳೆದು ಪರಾರಿ

error: Content is protected !!
Scroll to Top