ಬಂಟ್ವಾಳ: ಆಂಬ್ಯುಲೆನ್ಸ್ ಗೆ ರಸ್ತೆ ಬಿಟ್ಟು ಕೊಡದೆ ಸತಾಯಿಸಿದ ಟೂರಿಸ್ಟ್ ಕಾರು ► ಚಾಲಕನ ಅಮಾನವೀಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.31. ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ರಸ್ತೆ ಬಿಟ್ಟು ಕೊಡದೆ ಕಾರು ಚಾಲಕನೊಬ್ಬ ಸತಾಯಿಸಿದ ಘಟನೆ ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ‌ ಗುರುವಾರದಂದು ನಡೆದಿದೆ.

ಅನಾರೋಗ್ಯದ ಕಾರಣದಿಂದ ಚಿಕ್ಕಮಗಳೂರಿನಿಂದ ಮಂಗಳೂರಿನ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಮಂಗಳೂರು ನೋಂದಣಿ KA.19.AC.2847 ಯ ಟೊಯೋಟಾ ಇಟಿಯೋಸ್ ಕಾರೊಂದರ ಚಾಲಕ ಸುಮಾರು 10 ಕಿ.ಮೀ. ದೂರದವರೆಗೆ ದಾರಿ ಬಿಡದೆ ಅಮಾನವೀಯತೆ ಮೆರೆದಿದ್ದಾನೆ. ಆಂಬ್ಯುಲೆನ್ಸ್ ಚಾಲಕ ಸೈರನ್ ಹಾಕಿಕೊಂಡು, ಎಷ್ಟೇ ಹಾರನ್ ಮಾಡಿದ್ರು ಕಾರು ಚಾಲಕ ದಾರಿಬಿಟ್ಟು್ ಕೊಟ್ಟಿಲ್ಲ. ಆಂಬ್ಯುಲೆನ್ಸ್ ನ ಸೈರನ್ ಕೇಳಿ ಉಳಿದೆಲ್ಲಾ ವಾಹನಗಳು ದಾರಿ ಬಿಟ್ಟು ಕೊಟ್ಟರೂ ಇದೊಂದು ಕಾರು ಮಾತ್ರ ದಾರಿ ಬಿಟ್ಟಿಲ್ಲ. ಇದನ್ನು ಆಂಬ್ಯುಲೆನ್ಸ್ ವಾಹನದಲ್ಲಿದ್ದ ವ್ಯಕ್ತಿಯೋರ್ವರು ವೀಡಿಯೋ ಮಾಡಿದ್ದು, ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮಾನವೀಯ ವರ್ತನೆ ತೋರಿದ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Also Read  ಉಳ್ಳಾಲ: ಚಿನ್ನವನ್ನು ಮಹಿಳೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮರೆದ ಚಾಲಕ ಮತ್ತು ನಿರ್ವಾಹಕ

error: Content is protected !!
Scroll to Top