ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ(ರಿ.) ► ನಾಳೆ (ಸೆ.01): 102ನೇ ನೆಕ್ಕಿಲಾಡಿ ಗ್ರಾಮ ಸಮಿತಿ ರಚನೆಯ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಆ.31. ಒಕ್ಕಲಿಗ ಗೌಡ ಸೇವಾ ಸಂಘ ಕಡಬ (ರಿ.) ಇದರ ವತಿಯಿಂದ ಕಡಬ ವಲಯದ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಸಮಿತಿಗಳ ನೂತನ ಪದಾಧಿಕಾರಿಗಳ ಸಮಿತಿ ರಚನೆ ನಡೆಯುತ್ತಿದ್ದು, 102ನೇ ನೆಕ್ಕಿಲಾಡಿ ಗ್ರಾಮದ ಗ್ರಾಮ ಸಮಿತಿ ರಚನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 01 ಶನಿವಾರದಂದು ಸಂಜೆ 5:00 ಗಂಟೆಗೆ ಪುತ್ತಿಲ ಮೋನಪ್ಪ ಗೌಡರವರ ಮನೆಯಲ್ಲಿ ನಡೆಯಲಿದೆ.

ಈ ಸಭೆಗೆ ಗ್ರಾಮದ ಎಲ್ಲಾ ಗೌಡ ಸಮಾಜ ಬಾಂಧವರು ಉಪಸ್ಥಿತರಿದ್ದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಒಕ್ಕಲಿಗ ಗೌಡ ಸೇವಾ ಸಂಘ ಕಡಬ (ರಿ.) ದ ನಿಯೋಜಿತ ಕಾರ್ಯದರ್ಶಿ ಮಂಜುನಾಥ ಕೊಲಂತಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಡಿವೈಎಸ್‌ಪಿ, ಎಸ್‌ಐ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top