ಉಪ್ಪಿನಂಗಡಿ: ವೈದ್ಯರ ಬಳಿಗೆಂದು ತೆರಳಿದ ಬಾಲಕಿ ನಾಪತ್ತೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.31. ವೈದ್ಯರ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೋದ ಬಾಲಕಿಯೋರ್ವಳು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಬಾಲಕಿಯನ್ನು ಠಾಣಾ ವ್ಯಾಪ್ತಿಯ ಆಯಿಷಾ(16) ಎಂದು ತಿಳಿದು ಬಂದಿದ್ದು, ಈಕೆ ಉಪ್ಪಿನಂಗಡಿಗೆ ವೈದ್ಯರ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು, ಆ ಬಳಿಕ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. 5.1 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಬಣ್ಣದ ಚೂಡಿದಾರದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಈಕೆ ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾಳೆ. 9ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಈಕೆಯ ಬಗ್ಗೆ ಮಾಹಿತಿಯಿದ್ದಲ್ಲಿ ಉಪ್ಪಿನಂಗಡಿ ಠಾಣೆ – 08251-251055 ಅಥವಾ ಜಿಲ್ಲಾ ನಿಸ್ತಂತು ವಿಭಾಗ – 0824-2220500 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಪರ್ಪುಂಜ: ಬೈಕ್ ಗಳ ನಡುವೆ ಢಿಕ್ಕಿ

error: Content is protected !!
Scroll to Top