ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ ಸಿಸಿಬಿ ಪೊಲೀಸರು ► ಯಾಕೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.27. ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಮಾದಕ ವಸ್ತು ಗಾಂಜಾ ಸೇವನೆ ಕುರಿತ ಪ್ರಚೋದನೆ ನೀಡುವ ಹಾಡು, ಸಾಹಿತ್ಯ ರಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

2015 ರ ಜುಲೈನಲ್ಲಿ ‘ಅಂತ್ಯ’ ಹೆಸರಿನ ವಿಡಿಯೋವೊಂದನ್ನು ಟ್ಯೂಬ್‌ನಲ್ಲಿ ಹಾಕಲಾಗಿದ್ದು, ಇದುವರೆಗೂ ಈ ಹಾಡನ್ನು 90 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಹಾಡಿನಿಂದ ಪ್ರಚೋದನೆಗೆ ಒಳಗಾಗಿ ಯುವ ಸಮೂಹ ಮಾದಕ ವಸ್ತುವಾದ ಗಾಂಜಾ ಸೇವನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವ ಕಾರಣದಿಂದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪ್ರಶ್ನಿಸಿ ಚಂದನ್ ಶೆಟ್ಟಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ಈ ಹಾಡಿಗೆ ಮುತ್ತು ಎಂಬವರು ಸಾಹಿತ್ಯ ರಚನೆ ಮಾಡಿದ್ದು, ಚಂದನ್ ಶೆಟ್ಟಿ ನೀಡಿದ್ದರೆನ್ನಲಾಗಿದೆ.

Also Read  ಸುಳ್ಯ: ಬಸ್ - ಇನ್ನೋವಾ ಅಪಘಾತದ ಗಾಯಾಳು ಬಾಲಕಿ ಮೃತ್ಯು ➤ ಮೃತರ ಸಂಖ್ಯೆ ಮೂರಕ್ಕೆ ಏರಿಕೆ

error: Content is protected !!
Scroll to Top