►► Big Shocking News ಕೊಚ್ಚಿಹೋದ ಕೊಡಗಿನಲ್ಲಿ ಭೂಮಿಯಡಿಯಿಂದ ನೀರು ಹರಿಯುವ ಸದ್ದು..!! ► ಭಯಾನಕ ಘಟನೆ ಮಾಸುವ ಮುನ್ನವೇ ಪರಿಸರದ ಜನತೆ ಸುಸ್ತೋ ಸುಸ್ತು..!!

(ನ್ಯೂಸ್ ಕಡಬ) newskadaba.com ಸುಳ್ಯ, ಆ.27. ತೀವ್ರ ಮಳೆಯಿಂದಾಗಿ ಕೊಡಗು ಜಿಲ್ಲೆಯ ವಿವಿಧೆಡೆ ಕೊಚ್ಚಿಹೋಗಿ ಅಪಾರ ನಾಶ ನಷ್ಟ ಸಂಭವಿಸಿದ ಘಟನೆ ಮಾಸುವ ಮುನ್ನವೇ ಇದೀಗ ಭೂಮಿಯ ಒಳಗಿಂದ ನೀರು ಹರಿಯುವ ಶಬ್ದ ಕೇಳಿ ಬಂದಿದ್ದು ಮಡಿಕೇರಿ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ.

ತಾಲೂಕಿನ ಕರಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆತ್ತುಕಾಯ ಸಮೀಪದ ಕುಂಡತ್ತಿಕಾನ ನಿವಾಸಿ ಕೇಶವನಾಯ್ಕ್ ಎಂಬವರ ಮನೆಯ ಹಿಂಭಾಗದಲ್ಲಿ ಭೂಮಿಯ ಒಳಗಿನಿಂದ ನೀರು ಹರಿಯುವ ಶಬ್ದವು ಭಾನುವಾರ ರಾತ್ರಿಯಿಂದ ಕೇಳಿ ಬರುತ್ತಿದೆ. ಇದರಿಂದಾಗಿ ಸ್ಥಳೀಯರು ಗಾಬರಿಗೊಂಡಿದ್ದು, ವಿಷಯ ತಿಳಿದು ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರು ಹರಿಯುವ ಶಬ್ದವನ್ನು ಸ್ಥಳೀಯರು ವೀಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Also Read  ಅರಶಿಣ ಗುಂಡಿ ಜಲಪಾತಕ್ಕೆ ಬಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

error: Content is protected !!
Scroll to Top