ಕೆದಂಬಾಡಿ: ಅಕ್ರಮ ಕೋಳಿ ಅಂಕಕ್ಕೆ ದಾಳಿ ► ಏಳು ಜನರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.27. ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿರುವ ಪೊಲೀಸರು ಏಳು ಮಂದಿಯನ್ನು ಬಂಧಿಸಿ ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಆಡಿಸುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳಾದ ಕೊರಗಪ್ಪ, ಪುನೀತ್, ಮಾಧವ, ಶೇಖರ , ರವಿ, ದಿನೇಶ್, ಜಯರಾಮ, ಸುಂದರರವರನ್ನು ಬಂಧಿಸಿದ್ದು, ಉಮೇಶ್ ಎಂಬಾತನು ಪರಾರಿಯಾಗಿದ್ದಾನೆ‌. ವಿವಿಧ ಜಾತಿಯ ಏಳು ಕೋಳಿಗಳು, 3560 ರೂ. ನಗದು, ಎರಡು ಕೋಳಿ ಬಾಳು, ಮೂರು ಬೈಕ್ ಗಳನ್ನು ಸ್ವಾಧಿನಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  How one can get Rid of the Activate Windows Watermark in Windows Q0

error: Content is protected !!
Scroll to Top