ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ ► ಕಡಬದ ಜಯರಾಮ ಆರ್ತಿಲಗೆ ಜೇಸಿ ಸಾಧನಶ್ರೀ ಪುರಸ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಆ.27. ಜೇಸಿಐ ಪುತ್ತೂರು ಇದರ ಆತಿಥ್ಯದಲ್ಲಿ ಪರ್ಪುಂಜದ ಶಿವಕೃಪಾ ಅಡಿಟೋರಿಯಂನಲ್ಲಿ ಶನಿವಾರ ಜರಗಿದ ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಕಡಬ ಕದಂಬ ಘಟಕದ ಪೂರ್ವಾಧ್ಯಕ್ಷ ಜಯರಾಮ ಆರ್ತಿಲ ಅವರನ್ನು ಜೇಸಿ ಸಾಧನಶ್ರೀ-2018 ಪುರಸ್ಕಾರ ನೀಡಿ ಗೌರವಿಸಲಾಯಿತು.

ವ್ಯವಹಾರ ಕ್ಷೇತ್ರದಲ್ಲಿನ ಧನಾತ್ಮಕ ಸಾಧನೆ ಹಾಗೂ ಜೇಸಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತನ್ನ ಅಧ್ಯಕ್ಷಾವಧಿಯಲ್ಲಿ ಶಾಲೆ, ಅಂಗನವಾಡಿಗಳಿಗೆ ವಿವಿಧ ರೀತಿಯ ಕೊಡುಗೆ, ರಕ್ತ ವರ್ಗೀಕರಣ ಸಪ್ತಾಹದ ಮೂಲಕ ಕಡಬ ಪರಿಸರದ ವಿವಿಧ ಶಾಲೆಗಳ ಸುಮಾರು 1000ಕ್ಕೂ ಮಿಕ್ಕಿ ವಿದ್ಯಾರ್ಥಿಗಳ ರಕ್ತ ವರ್ಗೀಕರಣವನ್ನು ಉಚಿತವಾಗಿ ನಡೆಸಿದ್ದು, ರಕ್ತದಾನ ಶಿಬಿರ, ವನಮಹೋತ್ಸವ, ವಿದ್ಯಾರ್ಥಿಗಳಿಗೆ ತರಬೇತಿ, ಆರ್ಥಿಕ ಸಂಕಷ್ಟದಲ್ಲಿದ್ದ ರೋಗಿಗಳ ಚಿಕಿತ್ಸೆಗೆ ನೆರವು ಇತ್ಯಾದಿ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ನೀಡಲಾದ ಈ ಪುರಸ್ಕಾರವನ್ನು ಜೇಸಿ ವಲಯಾಧ್ಯಕ್ಷ ರಾಕೇಶ್ ಕುಂಜೂರು ಅವರು ಪ್ರದಾನ ಮಾಡಿದರು. ಕಡಬದಲ್ಲಿ ವ್ಯವಹಾರ ತರಬೇತಿ ಕಾರ್ಯಾಗಾರಕ್ಕೆ ಪ್ರಧಾನ ಆತಿಥ್ಯ ನೀಡಿದ ಕಡಬ ಜೇಸಿ ಅಧ್ಯಕ್ಷ ವೆಂಕಟೇಶ್ ಪಾಡ್ಲ ಅವರಿಗೆ ಸಮಾರಂಭದಲ್ಲಿ ಉದ್ಯಮ ಐಸಿರಿ ಪುರಸ್ಕಾರ ನೀಡಲಾಯಿತು. ವ್ಯವಹಾರ ವಿಭಾಗದ ವಲಯ ನಿರ್ದೇಶಕ ಪ್ರಶಾಂತ್ ರೈ, ವಲಯ ಉಪಾಧ್ಯಕ್ಷರಾದ ರವಿ ಕಕ್ಕೆಪದವು, ಪಶುಪತಿ ಶರ್ಮ, ವಲಯಾಧಿಕಾರಿ ಶಿವಪ್ರಸಾದ್ ರೈ ಮೈಲೇರಿ, ಸಮ್ಮೇಳನ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ಪುತ್ತೂರು ಜೇಸಿ ಅಧ್ಯಕ್ಷ ದಾಮೋದರ ಪಾಟಾಳಿ, ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ನಾಗರಾಜ್ ಎನ್.ಕೆ., ಕಡಬ ಜೇಸಿ ಪೂರ್ವಾಧ್ಯಕ್ಷರಾದ ಫಯಾಝ್ ಕೆನರಾ, ಮಂಜುನಾಥ ಮರ್ದಾಳ, ಕೆ.ಎಸ್.ದಿನೇಶ್ ಆಚಾರ್ಯ, ಕಾರ್ಯದರ್ಶಿ ಮೋಹನ ಕೋಡಿಂಬಾಳ, ಪದಾಧಿಕಾರಿಗಳಾದ ದಿವಾಕರ ಮುಂಡಾಲ, ಜಯರಾಮ ಮೂರಾಜೆ, ರಮೇಶ್ ಕೊಠಾರಿ ಮುಂತಾದವರು ಉಪಸ್ಥಿತರಿದ್ದರು.

Also Read  ಮೇರಿಹಿಲ್ನ: ಗೃಹರಕ್ಷಕರಿಂದ ಸ್ವಚ್ಛತಾ ಕಾರ್ಯಕ್ರಮ

error: Content is protected !!
Scroll to Top