ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ 6 ಜೊತೆ ಅವಳಿ-ಜವಳಿ ವಿದ್ಯಾರ್ಥಿಗಳು ► ವಿದ್ಯಾಸಂಸ್ಥೆಯ ಇತಿಹಾಸದಲ್ಲಿ ಪ್ರಥಮ

(ನ್ಯೂಸ್ ಕಡಬ) newskadaba.com ಕಾಣಿಯೂರು, ಆ.23. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆರು ಜೋಡಿ ಅವಳಿ-ಜವಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಎರಡನೇ ತರಗತಿಯಲ್ಲಿ ನೀತು-ನಿಧಿ ಹಾಗೂ ಶ್ರೀನಿಧಿ ಭಟ್-ಶ್ರೀಕಾಂತ್ ಭಟ್, ಮೂರನೇ ತರಗತಿಯಲ್ಲಿ ಅನಿಷ್ಕಾ-ಅನುಷ್ಕಾ, ಆರನೇ ತರಗತಿಯಲ್ಲಿ ಕ್ಷಮ-ಕ್ಷೇಮ, ಏಳನೇ ತರಗತಿಯಲ್ಲಿ ಮಹಮ್ಮದ್ ರೈಸ್-ಮಹಮ್ಮದ್ ರಿಜಾಸ್, ಹತ್ತನೇ ತರಗತಿಯಲ್ಲಿ ಗಗನ್-ಗೌತಮ್ ಸಹೋದರ ಸಹೋದರಿ ಜೋಡಿಗಳು ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅವಳಿ – ಜವಳಿ ವಿದ್ಯಾರ್ಥಿಗಳು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಅಧ್ಯಾಪಕರು, ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ನಮ್ಮ ವಿದ್ಯಾಸಂಸ್ಥೆಯಲ್ಲಿ ಇದೀಗ 6 ಜತೆ ಅವಳಿ-ಜವಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಸಂತಸ ತಂದಿದೆ. ಎರಡು ವರ್ಷಗಳ ಹಿಂದೆ ನಮ್ಮಲ್ಲಿ 3 ಜತೆ ಅವಳಿ-ಜವಳಿ ವಿದ್ಯಾರ್ಥಿಗಳಿದ್ದರು. ಶಾಲೆಯಲ್ಲಿ ನಡೆದ ಆಟಿದ ಕೂಟೊ ಲೇಸ್ ಕಾರ್ಯಕ್ರಮದಲ್ಲಿ 6 ಜತೆ ಅವಳಿ-ಜವಳಿ ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ ಎಂದಿದ್ದಾರೆ.

Also Read  ಎಲೆಕ್ಟ್ರಿಕ್ ಗೀಸರ್ ಬಳಸುವಾಗ ಯಾವಾಗಲೂ ಜಾಗ್ರತೆಯಿರಲಿ

error: Content is protected !!
Scroll to Top