ವಿಶ್ವ ಸೊಳ್ಳೆಗಳ ದಿನ – ಆಗಸ್ಟ್ 20 ► ಡಾ|| ಮುರಲೀ ಮೋಹನ್‍ ಚೂಂತಾರುರವರ ಲೇಖನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಆ.20. ಜಗತ್ತಿನಾದ್ಯಂತಆಗಸ್ಟ್ 20ನ್ನು ವಿಶ್ವ ಸೊಳ್ಳೆಗಳ ದಿನ ಎಂದುಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನುಕುಲದ ಮಹೋನ್ನತಿಗೆ ಮಹತ್ತರಕೊಡುಗೆ ನೀಡಿ, 1902ರಲ್ಲಿ ವೈದ್ಯವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತ ಭಾರತೀಯ ಸಂಜಾತ ಬ್ರಿಟಿಷ್ ವೈದ್ಯಸರ್‍ರೋನಾಲ್ಡ್‍ರೋಸ್‍ಅವರನ್ನು ಸ್ಮರಿಸುವ ಸುದಿನ. 1897ನೇ ಆಗಸ್ಟ್ 20ರಂದು ತಾನು ಮಾಡಿದ ಸಂಶೋಧನೆಗಳ ಮೂಲಕ ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆಎಂದುಜಗತ್ತಿಗೆ ಸಾರಿಹೇಳಿದ ಸುದಿನ. ಆ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮಾಡಿಸುವ ಸದುದ್ದೇಶದಿಂದ ವಿಶ್ವದಾದ್ಯಂತಆಗಸ್ಟ್ 20ರಂದು ವಿಶ್ವ ಸೊಳ್ಳೆಗಳ ದಿನ ಎಂದುಆಚರಿಸಲಾಗುತ್ತಿದೆ.

ಒಂದುಕಾಲದಲ್ಲಿಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂದು ಹೇಳಲಾಗುತ್ತಿತ್ತು.ಆದರೆ ಈಗ ಮಳೆಗಾಲದಲ್ಲಿ ಸೊಳ್ಳೆಗಳದ್ದೇ ಕಾರುಬಾರು.ಆ ಕಾರಣಕ್ಕಾಗಿಯೇ ಬೇಸಿಗೆಯಲ್ಲಿ ಸೆಕೆಯಕಾಟ ಮಳೆಗಾಲದಲ್ಲಿ ಸೊಳ್ಳೆಗಳ ಕಾಟಎಂದು ಹೇಳಲಾಗುತ್ತಿದೆ. ಏನೇ ಇದ್ದರೂ ಮಳೆಗಾಲದಲ್ಲಿ ಸೊಳ್ಳೆಗಳಿಗೆ ಪರ್ವಕಾಲ. ಅವುಗಳು ಹೆಚ್ಚಿನ ಸಂತಾನೋತ್ಪತ್ತಿ ಮಾಡುವುದು ಮಳೆಗಾಲದಲ್ಲಿಯೇ. ಸೊಳ್ಳೆಗಳ ಆಟಆರ್ಭಟ ಹೆಚ್ಚಾಗಿ ಕಾಣ ಸಿಗುವುದು ಮಳೆಗಾಲದಲ್ಲಿಯೇ. ಬೇಸಿಗೆಯಲ್ಲಿ ಕಾಣದಂತೆ ಮಾಯವಾಗುವ ಸೊಳ್ಳೆಗಳು ಮಳೆ ಬಂದು ಅಲ್ಲಲ್ಲಿ ನೀರು ನಿಂತೊಡನೆಯೇ ತಮ್ಮ ತಮ್ಮ ರುದ್ರ ನರ್ತನವನ್ನು ಮನಕುಲದ ಮೇಲೆ ತೋರಿಸಿಬಿಡುತ್ತದೆ. ಸೊಳ್ಳೆಗಳಿಗೆ ಮನುಷ್ಯನ ರಕ್ತವೆಂದರೆ ಅತೀವ ಪ್ರೀತಿ. ಮನುಷ್ಯನ ರಕ್ತವನ್ನು ಹೀರಿ ರೋಗಗಳನ್ನು ಹರಡಿಸುವ ಮನೆಮುರುಕು ಕೆಲಸ, ಉಂಡ ಮನೆಗೆ ದ್ರೋಹ ಬಗೆವ ಕಾರ್ಯವನ್ನು ಸೊಳ್ಳೆಗಳು ಸದ್ದಿಲ್ಲದೆ ಮಾಡುತ್ತದೆ. ಮಲೇರಿಯಾ, ಆನೆಕಾಲು ರೋಗ, ಡೆಂಘಿ, ಚಿಕೂನ್‍ಗೂನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತದೆ. ಅನಾಫೆಲಿಸ್ ಹೆಣ್ಣು ಸೊಳ್ಳೆ, ಏಡಿಸ್ ಸೊಳ್ಳೆ ಮತ್ತು ಕ್ಯೂಲೆಕ್ಸ್ ಸೊಳ್ಳೆ ಇವುಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳು ಅನಾಫೆಲೀಸ್ ಮಲೇರಿಯಾ ರೋಗಕ್ಕೆ ನಾಂದಿ ಹಾಡಿದಲ್ಲಿ ಏಡಿಸ್ ಸೊಳ್ಳೆ ಡೆಂಘಿ ಮತ್ತು ಚಿಕೂನ್‍ಗೂನ್ಯ ರೋಗಕ್ಕೆದಾರಿ ಮಾಡಿಕೊಡುತ್ತದೆ. ಕ್ಯೂಲೆಕ್ಸ್ ಸೊಳ್ಳೆಯಿಂದ ಮೆದುಳು ಜ್ವರ ಮತ್ತು ಆನೆಕಾಲು ರೋಗ ಹರಡುತ್ತದೆ.

ಸೊಳ್ಳೆಗಳು ದೇಹದಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ, ಮನುಕುಲದ ಬಹುದೊಡ್ಡ ವೈರಿ.ನಮ್ಮ ಮನುಷ್ಯರಜೀವನ ನಾಟಕದಲ್ಲಿ ಖಳ ನಾಯಕಪಾತ್ರವನ್ನು ಯಶಸ್ವಿಯಾಗಿಯೇ ವರ್ಷನು ವರ್ಷಗಳಿಂದ ನಿರ್ವಹಿಸುತ್ತಲೇ ಇದೆ. ಸೊಳ್ಳೆಗಳು ಮನುಷ್ಯನ ಏಳಿಗೆಗೆ ಬಹುದೊಡ್ಡ ಕಂಟಕವೆಂದರೂ ತಪ್ಪಲ್ಲ. ಜೀವನ ಕ್ರಿಕೇಟ್‍ ಆಟದಲ್ಲಿ ಮನುಷ್ಯನ ಕಡುವೈರಿ ಸೊಳ್ಳೆಗಳೇ. ಇವು ಯಾವತ್ತೂ ಹಾವು ಮುಂಗುಸಿಗಳು ಇದರ ನಡುವಿನ ವೈರಾತ್ವಕ್ಕೆ ಸರಿಸಾಟಿ ಇನ್ಯಾವುದೂ ಸಿಗಲಿಕ್ಕಿಲ್ಲ. ಮಲೇರಿಯಾ ಬಾಧಿಸಿದಷ್ಟು ತೊಂದರೆ, ಆರ್ಥಿಕ ನಷ್ಟ, ಸಾವು ನೋವು ಇನ್ನಾವುದೇ ರೋಗದಿಂದಲೂ ಬಂದಿಲ್ಲ ಆ ಕಾರಣದಿಂದಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅನಾಫೆಲಿಸ್ ಹೆಣ್ಣು ಸೊಳ್ಳೆ ಅನಾಯಾಸವಾಗಿ ಯಾವತ್ತೂ ಪಡೆದುಕೊಳ್ಳುತ್ತಿದೆ. ಮಲೇರಿಯಾದ ಕಪಿಮುಷ್ಟಿಗೆ ಸಿಕ್ಕಿ ಮನುಕುಲ ವಿಲವಿಲನೆ ಒದ್ದಾಡಿದೆ ಎಂದರೂ ಅತಿಶಯೋಕ್ತಿತಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ವರ್ಷಕ್ಕೆ 5 ಮಿಲಿಯನ್ ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಮಲೇರಿಯಾ ಮನಕುಲವನ್ನು ಗಡಗಡನೆ ನಡುಗಿಸುತ್ತಲೇ ಇದೆ. ವಿಪರ್ಯಾಸ್ಯವೆಂದರೆ ಮಲೇರಿಯಾ ಬಂದವರು ಚಳಿಜ್ವರದಿಂದ ನಡುಗುತ್ತಿದ್ದರೆ, ರೋಗ ಬರದವರು ರೋಗವನ್ನುತೀವ್ರತೆಯನ್ನು ನೆನೆಸಿ ನಡುಗುತ್ತಿದ್ದಾರೆ. ಲಕ್ಷಾಂತರಮಂದಿ ಸಾಯುತ್ತಲೇಇದ್ದಾರೆ. ಹೊಸ ಹೊಸ ಔಷಧಿಗಳು ಹೊಸ ಅಣುಜೀವಿಗಳು ಹುಟ್ಟುತ್ತಲೇ ಇವೆ. ಸೊಳ್ಳೆಗಳ ರುದ್ರನರ್ತನ ಮಂದುವರಿಯುತ್ತಲೇಇದೆ. ಮಲೇರಿಯಾದಜೊತೆಗೆಇತರಡೆಂಘಿ, ಮೆದುಳು ಜ್ವರ, ಆನೆಕಾಲು ರೋಗ, ಚಿಕೂನ್‍ಗೂನ್ಯಜ್ವರಹೀಗೆ ಸೊಳ್ಳೆಗಳುಒಂದಾದ ಮೇಲೊಂದರಂತೆ ಮನಕುಲದಮೇಲೆ ಪ್ರಹಾರ ಮಾಡುತ್ತಲೇ ಇದೆ.


ಜೀವಜಗತ್ತಿನ ಪ್ರಭೇದಗಳಲ್ಲಿ ಕೀಟ ಪ್ರಭೇದ ಬಹಳ ದೊಡ್ಡದು ಇದರಲ್ಲಿ ಸೊಳ್ಳೆಗಳದ್ದೇ ಸಿಂಹಪಾಲು ಜಗತ್ತಿನಾದ್ಯಂತ ಜನಿಸುವ ಸೊಳ್ಳೆಗಳಲ್ಲಿ ಶೇಕಡಾ 80ರಿಂದ 90ರಷ್ಟು ಕಾಡುಗಳಲ್ಲಿ ಹುಟ್ಟಿ ಬೆಳೆದು ಸಾಯುತ್ತದೆ. ಕೇವಲ 10ರಿಂದ 20ಶೇಕಡಾ ಮಾತ್ರ ಮನುಷ್ಯರ ಸಂಪರ್ಕಕ್ಕೆ ಬರುತ್ತದೆ. ಸಂತಸದ ವಿಚಾರವೆಂದರೆ ಈ ಶೇಕಡಾ 10ರಲ್ಲಿ, ಕೇವಲ ನೂರಲ್ಲಿ ಒಂದೆರಡು ಸೊಳ್ಳೆಗಳಿಗೆ ಮಾತ್ರ ಮಾನವನ ರಕ್ತಹೀರುವ ಅವಕಾಶ ದೊರಕುತ್ತದೆ. ಎಲ್ಲಾ ಸೊಳ್ಳೆಗಳಿಗೂ ಮನುಷ್ಯನ ರಕ್ತಹೀರುವ ಅವಕಾಶ ದೊರೆತಲ್ಲಿ ನಮ್ಮಉಹೆಗೂ ನಿಲುಕದ ರೋಗಗಳು ಹುಟ್ಟಬಹುದು ಮತ್ತು ಹರಡ ಬಹುದು.

ಸೊಳ್ಳೆಗಳ ನಿಯಂತ್ರಣ ಹೇಗೆ ?
ಕಾಡು ಬಿಟ್ಟು ನಾಡು ಸೇರಿದ ಸೊಳ್ಳೆಗಳಿಗೆ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ರಕ್ತವೇ ಆಹಾರ ಕಾಡು ಕಡಿದು ಕಾಂಕ್ರೀಟ್‍ ನಾಡು ಮಾಡಿರುವ ಮನುಷ್ಯನಿಗೆ ಉಚಿತವಾಗಿ ದೊರಕಿದ ಸಂಗಾತಿ ಸೊಳ್ಳೆ ಎಂದರೂತಪ್ಪಲ್ಲ. ಕಾಡು ಮೇಡುಗಳಲ್ಲಿ ಹಾಯಾಗಿದ್ದ ಸೊಳ್ಳೆ ಮನೆ ಮಠ ಕಳೆದು ಕೊಂಡು ಬೀದಿಗೆ ಬಿದ್ದಾಗ ಪಾಪ ಹೊಟ್ಟೆ ಪಾಡಿಗಾಗಿ ಮನುಷ್ಯರ ರಕ್ತ ಹೀರಲೇಬೇಕು. ಇದು ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ. ಹೆಣ್ಣು ಸೊಳ್ಳೆಗಳಿಗೆ ಮೊಟ್ಟೆಇಡುವ ಸಮಯದಲ್ಲಿ ರಕ್ತ ಅತೀ ಅಗತ್ಯ. ಇದಕ್ಕಾಗಿ ಇವುಗಳು ಹೆಚ್ಚಾಗಿ ಮನುಷ್ಯನ ಮತ್ತು ಇತರ ಪ್ರಾಣಿಗಳ ರಕ್ತ ಹೀರುತ್ತದೆ.ಈ ಪ್ರಕ್ರಿಯೆಯಲ್ಲಿ ರೋಗಿಗಳಿಂದ ಹೀರಿದ ರಕ್ತಗಳ ಜೊತೆಗೆ ರೋಗಿಯಲ್ಲಿನ ಜೀವಾಣುಗಳನ್ನು ಹೀರಿಕೊಂಡು ಬಿಡುತ್ತದೆ.ಆ ಬಳಿಕ ಈ ರೋಗಾಣು ಯುಕ್ತ ಸೊಳ್ಳೆ ಆರೋಗ್ಯವಂತ ಮನುಷ್ಯರನ್ನು ಕಚ್ಚಿ ತನ್ನ ಎಂಜಲಿನಲ್ಲಿನ ರೋಗಾಣುಗಳನ್ನು ಆತನಿಗೂ ಹಬ್ಬಿಸಿ ರೋಗವನ್ನು ಹರಡಿಸುತ್ತದೆ. ಹೀಗೆ ಸೊಳ್ಳೆಗಳು ರೋಗವಾಹಕ ಕೀಟಗಳಾಗಿ ಮನುಕುಲಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ. ಸೊಳ್ಳೆ ನಿಯಂತ್ರಣಕ್ಕೆ ಈ ಕೆಳಗಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

1. ಪರಿಸರದ ಸ್ವಚ್ಛತೆಯನ್ನುಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದಅನಿವಾರ್ಯತೆಇದೆಮತ್ತುಇತರಜೀವ ಸಂಕುಲಗಳನ್ನು ಬದುಕಲು ಬಿಡಬೇಕು
2. ಸೂಕ್ತ ನೀರಿನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆ ಮಾಡಬೇಕು. ಉತ್ತಮಚರಂಡಿ ವ್ಯವಸ್ಥೆ, ನದಿ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.
3. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಮತ್ತುಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ.
4. ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತುದ್ರವ್ಯ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿನಿರ್ವಹಣೆಮಾಡುವುದು ಇತ್ಯಾದಿಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ.
5. ಕೃತಕವಾಗಿ ನೀರು ನಿಲ್ಲುವ ಜಾಗಗಳಾದ ತೆಂಗಿನಚಿಪ್ಪು, ಹೂದಾನಿ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‍ಗಳು, ಅಕ್ವೇರಿಯಂ, ಏರ್‍ಕಂಡಿಷನರ್ ಮತ್ತುಏರ್‍ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆ ನಿಲ್ಲದಂತೆ ಮಾಡಿಕೊಳ್ಳಬೇಕು
6. ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿ ವಿiÁನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು.
7. ಕೀಡನಾಶಕಗಳ ಬಳಕೆ ಸೊಳ್ಳೆ ನಿಯಂತ್ರಣ ಮಾಡುವ ಔಷಧಿಗಳ ಬಳಕೆ ಮುಂತಾದುವುಗಳಿಂದ ಸೊಳ್ಳೆಗಳ ಸಂತಾನಭಿವೃದ್ಧಿಆಗದಂತೆ ಮಾಡಬೇಕು.
8. ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹಯಾವುದೇರೀತಿಯ ಪರಿಸರ ಮಾಲಿನ್ಯವನ್ನತಡೆಗಟ್ಟಬೇಕು.
ಒಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕಾದ ತುರ್ತು ಅವಶ್ಯಕತೆ ಇದೆ.

ಯಾರೀತರೋನಾಲ್ಡ್‍ರೋಸ್( 13 ಮೇ 1857 – 16 ಸಪ್ಟೆಂಬರ್ 1932)
1857ನೇ ಮೇ 13ರಂದು ಭಾರತದ ಅಲೋರಾ ಎಂಬಲ್ಲಿ (ಈಗಿನ ಉತ್ತರಾಖಂಡ ರಾಜ್ಯ) ಜನಿಸಿದರು. ಬ್ರಿಟಿಷ್‍ ಭಾರತೀಯ ಸೇನೆಯ ಜನರಲ್‍ ಆಗಿದ್ದ ಸರ್‍ಕ್ಯಾಂಪ್‍ ಬೆಲ್‍ಗ್ರಾಂಟ್‍ರೋಸ್‍ ಇವರ ಹತ್ತು ಮಕ್ಕಳಲ್ಲಿ ಹಿರಿಯವನೇ ರೋನಾಲ್ಡ್ಡ್‍ರೋಸ್. ಪ್ರಾಥಮಿಕವೈದ್ಯಕೀಯ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ಬಳಿಕ 1881 ಸಪ್ಟೆಂಬರ್ 22ರಂದು ಭಾರತೀಯ ವೈದ್ಯಕೀಯ ಸೇವೆಗೆ (IಒS)ನಿಯುಕ್ತಿಗೊಂಡರು. 1881ರಿಂದ 1894ರವರೆಗೆ ಮದ್ರಾಸ್, ಬರ್ಮಾ,ಅಂಡಮಾನ್, ಬೆಂಗಳೂರು, ಸಿಕಂದರ್‍ಬಾದ್, ಹೀಗೆ ಅಖಂಡ ಭಾರತದಾದ್ಯಂತ ಸೇನೆಯ ಸರ್ಜನ್ ಆಗಿ ಸೇವೆ ಸಲ್ಲಿಸಿದರು. ಬೆಂಗಳೂರು, ಊಟಿ ಮತ್ತು ಸಿಕಂದರ್‍ಬಾದ್‍ನಲ್ಲಿ ಸೇವೆ ಸಲ್ಲಿಸುವಾಗ ಮಳೆಗಾಲದಲ್ಲಿ ಹೆಚ್ಚು ಮಲೇರಿಯಾ ಬರುವುದನ್ನು ಗಮನಿಸಿ ಸೊಳ್ಳೆಗಳೇ ಮೂಲಕವೇ ಮಲೇರಿಯಾ ಹರಡುತ್ತದೆಎಂದು ನಿಶ್ಚಯಿಸಿದರು. ಕ್ವಿನೈನ್‍ ಔಷಧದ ಸೇವನೆಯ ಹೊರತಾಗಿಯೂ, ಸ್ವತಃ ಮೂರು ಬಾರಿ ಮಲೇರಿಯಾರೋಗ ಬಂದರೂ ಹಟ ಬಿಡದಚಾಣಕ್ಯನಂತೆಸಂಶೋಧನೆ ಮುಂದುವರಿಸಿದರು. 20 ಮಲೇರಿಯಾ ಹರಡುವಅನಾಫೆüಲಿಸ್ ಸೊಳ್ಳೆಗಳ ಮೊಟ್ಟೆಗಳನ್ನು ಬೆಳೆಸಿ, ಬಳಿಕ ಹುಸೈನ್‍ಖಾನ್ ಎಂಬ ಮಲೇರಿಯಾ ರೋಗಿಗೆ ಈ ಸೊಳ್ಳೆಗಳಿಂದ ಕಡಿಸಿ,ಆ ಬಳಿಕ ಈ ಮಲೇರಿಯಾ ರಕ್ತ ಹೀರಿದ ಸೊಳ್ಳೆಗಳನ್ನು ಸೂಕ್ಷ್ಮದರ್ಶಕದಲ್ಲಿಪರೀಕ್ಷಿಸಿ, ಅವುಗಳ ಹೊಟ್ಟೆಯಲ್ಲಿ ವೃತ್ತಾಕಾರದ ಜೀವಿಯನ್ನು ಪತ್ತೆಹಚ್ಚಿದರು. ಇದುವೇ ಮಲೇರಿಯಾ ಹರಡಿಸುವ ಪರಾವಲಂಬಿ ಜೀವಿಯಾದ ಪ್ಲಾಸ್ಮೋಡಿಯಂ ಎಂದು ದೃಢಪಟ್ಟಿತು. ಈ ಮಲೇರಿಯಾರೋಗಿಯಿಂದ ಸೊಳ್ಳೆಗಳನ್ನು ಕಡಿಸಿಕೊಳ್ಳಲು ಆತ ಖರ್ಚು ಮಾಡಿದ್ದು 20 ಆಣೆಗಳು (ಒಂದುಕಡಿತಕ್ಕೆಒಂದುಅಣೆಗಳು) ಹೀಗೆ ಆಗಸ್ಟ್ 20, 1897ರಂದು ಈ ಸಂಶೋಧನೆ ಜಗತ್ತಿನ ಹೊಸ ರಹದಾರಿಯನ್ನು ತೆರೆದಿಟ್ಟಿತು. ಅದಕ್ಕಾಗಿಯೇಆಗಸ್ಟ್ 20ರಂದು ವಿಶ್ವಸೊಳ್ಳೆಗಳ ದಿನ ಎಂದುಆಚರಿಸಲಾಗುತ್ತಿದೆ.ಈ ಸಂಶೋಧನೆಗಳ ಹೊರತಾಗಿಯೂ ನಾವಿಂದು ಮಲೇರಿಯಾದಕದಂಬ ಬಾಹುಗಳಲ್ಲಿ ಸಿಲುಕಿ ನಲುಗುತ್ತಿರುವುದೇ ವಿಪರ್ಯಾಸ. ಒಂದು ಶತಮಾನದ ಹಿಂದೆಯೇ ಸೊಳ್ಳೆಗಳಿಂದ ರೋಗ ಹರಡುತ್ತದೆಎಂದು ತಿಳಿದು ಕೊಂಡಿದ್ದರೂ ಸೊಳ್ಳೆಗಳ ನಿಯಂತ್ರಣಕ್ಕೆ ನಾವು ಗಮನ ಹರಿಸುತ್ತಿಲ್ಲದಿರುವುದು ವಿಷಾದನೀಯ ಸಂಗತಿ. ನಾವು ಸಂಶೋಧನೆ ಮಾಡಲಾಗದಿದ್ದರೂ ಯಾರಾದರೂ ಸಂಶೋಧನೆ ಮಾಡಿ ಜಗತ್ತಿಗೆ ಸಾರಿ ಹೇಳಿದ ಸತ್ಯವನ್ನುಎತ್ತಿಹಿಡಿದು ಸೊಳ್ಳೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ದಿಟ್ಟ ಕ್ರಮಕೈಗೊಂಡರೆ ಅದುವೇ ಆ ಮಹಾನ್‍ ಆತ್ಮಕ್ಕೆ ನಾವು ನೀಡುವ ಬಹುದೊಡ್ಡ ಗೌರವ. ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಸಾವಿಗೆ ಕಾರಣವಾದ ಈ ರೋಗಕ್ಕೆ ನಾಂದಿ ಹಾಡುವ ಸೊಳ್ಳೆಗಳನ್ನು ನಿಯಂತ್ರಣಕ್ಕೆ ನಾವೆಲ್ಲಾ ಟೊಂಕಕಟ್ಟೋಣ. ಅದರಲ್ಲಿಯೇ ನಮ್ಮ ಸಮಾಜದ, ದೇಶದ ಮತ್ತು ಜಗತ್ತಿನ ಒಳಿತು ಅಡಗಿದೆ. ವಿಶ್ವ ಸೊಳ್ಳೆಗಳ ಶುಭ ದಿನದಂದು ಸರ್‍ರೋನಾಲ್ಡ್‍ರೋಸ್‍ನ ಆತ್ಮಕ್ಕೆ ಶಾಂತಿ ಮತ್ತು ನೆಮ್ಮದಿ ದೊರಕಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

ಡಾ|| ಮುರಲೀ ಮೋಹನ್‍ಚೂಂತಾರು
ಹಿರಿಯ ಪ್ರಾಧ್ಯಾಪಕರು
ಎ.ಬಿ. ಶೆಟ್ಟಿದಂತ ವೈದ್ಯಕೀಯ ವಿದ್ಯಾಲಯ
ದೇರಳೆಕಟ್ಟೆ, ಮಂಗಳೂರು

error: Content is protected !!

Join the Group

Join WhatsApp Group