ಪುತ್ತಿಗೆ: ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ► ತ್ತದ ಪೈರು, ಬಾಳೆ ಸೇರಿದಂತೆ ಅಪಾರ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಕಡಬ, ಆ.20. ಕೊಣಾಜೆ ಗ್ರಾಮದ ಪುತ್ತಿಗೆ ನೆಕ್ಕಾಜೆ ಲೋಕಯ್ಯ ಗೌಡರ ಕೃಷಿ ಭೂಮಿಗೆ ಶನಿವಾರ ರಾತ್ರಿ ಕಾಡಾನೆ ದಾಳಿ ನಡೆಸಿದ್ದು ಬತ್ತದ ಪೈರು, ಬಾಳೆ ನಾಶ ಪಡಿಸಿದ್ದು ಅಪಾರ ನಷ್ಟವಾಗಿದೆ.

ಕಾಡಿನಿಂದ ಆಗಾಗ ಈ ಭಾಗದ ಕೃಷಿ ಭೂಮಿಗೆ ದಾಳಿ ನಡೆಸುತ್ತಿರುವ ಕಾಡಾನೆಯು ಕಳೆದ ರಾತ್ರಿ ತನ್ನ ಒಂದು ಹೆಕ್ಟೆರ್ ಜಾಗದಲ್ಲಿರುವ ಬತ್ತದ ಪೈರನ್ನು ಸಂಪೂರ್ಣ ನಾಶಪಡಿಸಿದ್ದಲ್ಲದೆ, ಬಾಳೆ ಕೂಡ ನಾಶ ಮಾಡಿದೆ. ಇದರಿಂದ ತನಗೆ ಸುಮಾರು 30 ಸಾವಿರಕ್ಕಿಂತಲೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ತಿಳಿಸಿದ ನೆಕ್ಕಾಜೆ ಲೋಕಯ್ಯ ಗೌಡರು ಸಂಬಂಧಪಟ್ಟ ಕಂದಾಯ, ಕೃಷಿ, ತೋಟಗಾರಿಕಾ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿರುತ್ತೇನೆ ಎಂದು ತಿಳಿಸಿದ್ದಾರೆ.

Also Read  ರೀಲ್ಸ್ ಗಾಗಿ ರಸ್ತೆಯಲ್ಲಿ ಯುವಕನ ಹುಚ್ಚಾಟ - ಆರೋಪಿ ಅರೆಸ್ಟ್

error: Content is protected !!
Scroll to Top