(ನ್ಯೂಸ್ ಕಡಬ) newskadaba.com ಕಡಬ, ಆ.20. ಇಲ್ಲಿಯ ಕಾಲೇಜು ರಸ್ತೆಯ ಅಡ್ಡಗದ್ದೆಯಲ್ಲಿ ಭೃಹತ್ ಗಾತ್ರದ ಗುಡ್ಡ ಕುಸಿದು, ಮರ ಗಿಡಗಳು, ಕಲ್ಲುಬಂಡೆಗಳು ಉರುಳಿ ಬೀಳುತ್ತಿದ್ದು ಗುಡ್ಡದ ಮೇಲಿರುವ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು ಧರೆಯ ಕೆಳಭಾಗದಲ್ಲಿರುವ ನಾಲ್ಕೈದು ಮನೆಗಳು ಬೀಳುವ ಭಯದಿಂದ ವಾಸ್ತವ್ಯ ಬದಲಾಯಿಸಿರುವುದಲ್ಲದೆ, ನಜಿಮುನ್ನಿಸರವರ ಕಟ್ಟಡದ ಹಿಂದಿನ ಧರೆ ಸಂಪೂರ್ಣ ಕುಸಿದಿದ್ದು ಕಟ್ಟಡ ನೆಲಸಮಗೊಂಡಿರುವುದಲ್ಲದೆ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಭಾನುವಾರದಂದು ನಡೆದಿದೆ.
ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸುಮಾರು 15 ಅಡಿ ಎತ್ತರಕ್ಕೂ ಮೇಲ್ಪಟ್ಟ ಗುಡ್ಡ ಕುಸಿದು ಬಿದ್ದಿರುವುದಲ್ಲದೆ, ಇನ್ನೂ ಬೀಳುವ ಹಂತದಲ್ಲಿದ್ದು ಕಟ್ಟಡದ ಒಂದು ಪಾಶ್ರ್ವ ಮಣ್ಣಿನಡಿಗೆ ಬಿದ್ದು ನಾಶವಾಗಿದ್ದು ಲಕ್ಷಾಂತರ ರೂ.ನಷ್ಟವಾಗಿದ್ದು, ಇನ್ನೂ ಧರೆ ಬೀಳುವ ಹಂತದಲ್ಲಿದ್ದು ಧರೆ ಉರುಳುವ ಸಂಭವವಿದ್ದರೆ ನೆರೆಯ ಗುಡ್ಡದ ಮೇಲಿರುವ ಜೋಸೆಪ್‍ರವರ ಕಟ್ಟಡವು ಬೀಳುವ ಹಂತದಲ್ಲಿದ್ದು ಕಟ್ಟಡದ ಅಡಿಯಲ್ಲಿರುವ ಧರೆ ಹಾಗೂ ಕಲ್ಲು ಬಂಡೆಗಳು ಉರುಳಿ ಬೀಳುತ್ತಿದ್ದು ಕೆಲ ಭಾಗದಲ್ಲಿ ವಾಸ್ತವ್ಯವಿರುವ ನಸೀರು, ಜುಬೈದಾ, ಇಬ್ರಾಹಿಂ ರವರು ಈಗಾಗಲೇ ಭಯದಿಂದ ಮನೆಯಿಂದ ವಾಸ್ತವ್ಯ ಬದಲಾಯಿಸಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಕಡಬ ತಹಶೀಲ್ದಾರ್ ಜಾನ್‍ಪ್ರಕಾಶ್ ರಾಡ್ರಿಗಸ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕಡಬ ಗ್ರಾಮಕರಣಿಕ ಶೇಷಾದ್ರಿ, ಜಿ.ಪಂ.ಇಂಜಿನೀಯರ್ ಭರತ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನ್ನ 55 ವರ್ಷ ಜೀವನದಲ್ಲಿ ತಾನೆಂದು ಇಂತಹ ಅದ್ಭುತ ಅವಗಢ ಕಂಡಿರುವುದಿಲ್ಲ ಮನೆಯ ಹಿಂದುಗಡೆ ಇರುವ ಅಷ್ಟು ದೊಡ್ಡ ಗುಡ್ಡ ಕುಸಿದು ಅಡಿಕೆ, ತೆಂಗು, ರಬ್ಬರ್‍ನ ಮರ ಗಿಡಗಳೆಲ್ಲ ಉರುಳಿ ಬಿದ್ದು ರಬ್ಬರ್ ಸ್ಮೋಕ್ ಹೌಸ್ ಹಾಗೂ ಮಿಷನ್‍ಗಳು ಸಂಪೂರ್ಣ ಬಿದ್ದು ಹೋಗಿದ್ದು, ಕಟ್ಟಡಕ್ಕೆ ಹಾನಿಯಾಗಿರುವುದಲ್ಲದೆ, ಕಟ್ಟಡದ ಸಾಮಾಗ್ರಿಗಳು ಸಂಪೂರ್ಣ ನಾಶವಾಗಿದ್ದು ಐದಾರು ಲಕ್ಷಕ್ಕಿಂತಲೂ ಹೆಚ್ಚಿನ ನಷ್ಟ ಉಂಟಾಗಿದೆ. ಇನ್ನೂ ಇದೇ ರೀತಿ ಮಳೆ ಮುಂದುವರಿದರೆ ಈ ಭಾಗದ ಎಲ್ಲಾ ಗುಡ್ಡ ಪ್ರದೇಶಗಳು ಕುಸಿದು ಕಟ್ಟಡಗಳೆಲ್ಲ ನೆಲಸಮವಾಗುವ ಆತಂಕ ಎದುರಾಗಿದೆ.
-ನಜಿಮುನ್ನಿಸಾ ಅಡ್ಡಗದ್ದೆ.