ಕೇರಳ ನೆರೆ ಹಾವಳಿಗೆ ನಲುಗುವ ಬಗ್ಗೆ ಭವಿಷ್ಯ ನುಡಿದಿದ್ದ ಮಾನಸಿಕ ಅಸ್ವಸ್ಥ ► ನೆರೆಯನ್ನು ಎಚ್ಚರಿಸುವ ವ್ಯಂಗ್ಯ ಮಾತುಗಳು ಇದೀಗ ವೈರಲ್

(ನ್ಯೂಸ್ ಕಡಬ) newskadaba.com ಕೇರಳ, ಆ.19. ಭಾರೀ ಮಳೆ ಹಾಗೂ ನೆರೆಯಿಂದ ತತ್ತರಿಸಿರುವ ಕೇರಳದಲ್ಲಿ ತಿಂಗಳ ಹಿಂದೆ ಮಾನಸಿಕ ಅಸ್ವಸ್ಥ ರೀತಿಯಲ್ಲಿರುವ ವ್ಯಕ್ತಿಯೊಬ್ಬರು ನೆರೆಯನ್ನು ನೆನಪಿಸುವ ಮಾತೊಂದನ್ನು ಆಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿರ್ಮಾಣ ಹಂತದ ಮನೆಯ ಮುಂಭಾಗದಲ್ಲಿ ನಿಂತು ಮಲಯಾಳಂ ಭಾಷೆಯಲ್ಲಿ ಮಾತನಾಡುವ ಆ ವ್ಯಕ್ತಿಯು ‘ಸಮಯವಿಲ್ಲ, ಯಾರಿಗೂ ಸಮಯವಿಲ್ಲ, ಎಲ್ಲರೂ ಬ್ಯುಸಿ ಆಗಿದ್ದಾರೆ. ದುಡ್ಡು ಮಾಡಿ ದೊಡ್ಡ ಬಂಗಲೆಗಳನ್ನು ಕಟ್ಟಿ ಅದರಲ್ಲಿ ದುಡ್ಡನ್ನು ಕೂಡಿಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಆ ಬಂಗಲೆಗಳು ಒಡೆದು ನೆರೆ ಬರಲಿದ್ದು, ಆ ನೆರೆಯಲ್ಲಿ ದುಡ್ಡಿನ ಕಟ್ಟು ಒಡೆದು ಹೋಗಿ ನಾಶವಾಗಲಿದೆ. ನೀನು ಮತ್ತು ನಿನ್ನ ಕುಟುಂಬಸ್ಥರು ಆ ನೆರೆಯಲ್ಲಿ ನಶಿಸಿ ಹೋಗಲಿದ್ದೀರಿ. ಮುಸಲ್ಮಾನನೂ ಸಾಯ್ತಾನೆ, ಹಿಂದುವೂ ಸಾಯ್ತಾನೆ, ಕ್ರೈಸ್ತನೂ ಸಾಯ್ತಾನೆ ಎಂದು ವ್ಯಂಗ್ಯವಾಗಿ ನುಡಿಯುವುದನ್ನು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆ ವ್ಯಕ್ತಿಯ ಮಾತು ತಿಂಗಳ ಹಿಂದೆ ಮಾಡಿದ್ದೆಂದು‌ ಹೇಳಲಾಗುತ್ತಿದ್ದು, ನೆರೆಯ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡಿದ್ದರೂ, ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ಆ ಮಾತು ನಿಜವಾಗಿದೆ.

Also Read  ಮಂಗಳೂರು ಸೆನ್ ಕ್ರೈಂ ಠಾಣಾ ಎಎಸ್ಐ ಆಗಿ ಶೀನಪ್ಪ ಪೂಜಾರಿ ಮುಂಭಡ್ತಿ

error: Content is protected !!
Scroll to Top