ಶಿರಾಡಿ, ಸಂಪಾಜೆ ಘಾಟ್ ರಸ್ತೆ ತಡೆಯಿಂದಾಗಿ ಹೆಚ್ಚಿದ ವಾಹನ ದಟ್ಟಣೆ ► ಕರಾವಳಿ ಸಂಪರ್ಕದ ಏಕೈಕ ಸಂಪರ್ಕ ರಸ್ತೆ ಚಾರ್ಮಾಡಿ ಘಾಟ್ ಕುಸಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.17. ತೀವ್ರ ಮಳೆಯಿಂದಾಗಿ ತತ್ತರಿಸಿರುವ ಕರಾವಳಿಗೆ ರಾಜ್ಯ ರಾಜಧಾನಿಗೆ ಸಂಪರ್ಕಕ್ಕಾಗಿ ಇದ್ದ ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ಕುಸಿತಗೊಂಡು ಸಂಪರ್ಕ ಕಡಿತಗೊಂಡಿರುವುದರ ನಡುವೆ ಇದೀಗ ಸಂಪರ್ಕಕ್ಕಾಗಿ ಇರುವ ಏಕೈಕ ರಸ್ತೆಯು ಕುಸಿತದ ಭೀತಿಯಲ್ಲಿದೆ.

ಚಾರ್ಮಾಡಿ ಘಾಟ್ ನ ಐದನೇ ತಿರುವಿನಲ್ಲಿ ಗುಡ್ಡ ಕುಸಿಯುವ ಸನ್ನಿವೇಶ ನಿರ್ಮಾಣವಾಗಿದ್ದು, ಇಲ್ಲಿ ಸಂಪೂರ್ಣ ಕುಸಿತವುಂಟಾದರೆ ಚಾರ್ಮಾಡಿ ಘಾಟ್ ರಸ್ತೆಯೂ ಹಲವಾರು ದಿನಗಳ ಕಾಲ ಬಂದ್ ಆಗುವ ಭೀತಿ ಎದುರಾಗಿದೆ. ಶಿರಾಡಿ ಮತ್ತು ಸಂಪಾಜೆ ಘಾಟ್ ರಸ್ತೆಗಳು ಬಂದ್‌ ಆಗಿರುವ ಪರಿಣಾಮ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿರುವುದರಿಂದ ರಸ್ತೆಯ ಅಡಿಭಾಗವೂ ಈಗಾಗಲೇ ಭಾಗಶಃ ಕುಸಿತಗೊಂಡಿದ್ದು, ಪೂರ್ತಿ ಕುಸಿತಗೊಂಡರೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ.

Also Read  ಈ 5 ರಾಶಿಯವರಿಗೆ ಪ್ರೇಮ ವಿವಾಹ, ಧನ ಪ್ರಾಪ್ತಿ,ಕಂಕಣ ಭಾಗ್ಯ ಕೂಡಿ ಬರುತ್ತದೆ

error: Content is protected !!
Scroll to Top