ಭಾರೀ ಮಳೆಗೆ ಘಾಟ್ ರಸ್ತೆಗಳು ಕುಸಿಯುತ್ತಿರುವ ಹಿನ್ನೆಲೆ ► ಶಿರಾಡಿ, ಸಂಪಾಜೆ ಘಾಟ್ ರಸ್ತೆಗಳಲ್ಲಿ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.15. ಭಾರೀ ಮಳೆಯಿಂದಾಗಿ ತತ್ತರಿಸಿರುವ ಶಿರಾಡಿ ಘಾಟ್ ಹಾಗೂ ಸಂಪಾಜೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಘಾಟ್ ಪ್ರದೇಶದ ಅಲ್ಲಲ್ಲಿ ಗುಡ್ಡು ಕುಸಿತದಂತಹ ಅಪಾಯಕಾರಿ ಸನ್ನಿವೇಶಗಳು ಉಂಟಾಗುತ್ತಿರುವ ಮತ್ತು ಹಲವು ವಾಹನಗಳ ಪ್ರಯಾಣಿಕರು ರಸ್ತೆ ತಡೆಯಿಂದಾಗಿ ಪರದಾಡಿದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನಗಳನ್ನು ನಿಷೇಧಿಸಿ, ಮುಂದಿನ ಆದೇಶದ ವರೆಗೆ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಮಾತ್ರ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Also Read  ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ್ ಪಾಳ್ಯ ಆಯ್ಕೆ

error: Content is protected !!
Scroll to Top