ತೀವ್ರ ಮಳೆಯ ಹಿನ್ನೆಲೆ ► ಹೊಸ್ಮಠ ಸೇತುವೆ ಮತ್ತೆ ಮುಳುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.12. ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೊಸ್ಮಠ ಸೇತುವೆಯು ಭಾನುವಾರದಂದು ಮತ್ತೆ ಮುಳುಗಿದ್ದು, ಸಂಚಾರದಲ್ಲಿ ತಡೆಯುಂಟಾಗಿದೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಪ್ರಯಾಣಿಕರು ಇಚಿಲಂಪಾಡಿ – ಪೆರಿಯಶಾಂತಿ ರಸ್ತೆಯ ಮೂಲಕ ಸಂಚರಿಸುವಂತಾಗಿದೆ. ಸೇತುವೆಯ ಇಕ್ಕೆಡೆಗಳಲ್ಲೂ ಕಡಬ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ‌. ತೀವ್ರ ಮಳೆಯ ಹಿನ್ನೆಲೆಯಲ್ಲಿ ಬುಧವಾರದಿಂದ ಗುರುವಾರ ರಾತ್ರಿಯ ವರೆಗೆ ಹೊಸ್ಮಠ ಸೇತುವೆಯು ಎರಡು ದಿನಗಳ ಕಾಲ ಮುಳುಗಡೆಗೊಂಡಿದ್ದು, ಇದೀಗ ಮತ್ತೆ ಮುಳುಗಿದೆ.

Also Read  ಉಡುಪಿ: ಗೋಡೌನ್‌ನಲ್ಲಿ ಭಾರೀ ಅಗ್ನಿ ಅವಘಡ; 40 ಲಕ್ಷ ರೂ. ನಷ್ಟ

error: Content is protected !!