ಶರವೂರು: ಅಕ್ರಮ ಜುಗಾರಿ ಅಡ್ಡೆಗೆ ದಾಳಿ ► ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಆ.12. ತಾಲೂಕಿನ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿನ ಗೇರು ತೋಪಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಶನಿವಾರ ಸಂಜೆ ದಾಳಿ ನಡೆಸಿರುವ ಕಡಬ ಪೋಲೀಸರು ಆರು ಜನರನ್ನು ಬಂಧಿಸಿದ್ದಾರೆ.

 

ಖಚಿತ ಮಾಹಿತಿ ಆಧಾರದಲ್ಲಿ ಕಡಬ ಎಸ್‍ಐ ಪ್ರಕಾಶ್ ದೇವಾಡಿಗ ಅವರ ನೇತೃತ್ವದಲ್ಲಿ ಪೋಲೀಸರು ದಾಳಿ ನಡೆಸಿ ಆಲಂಕಾರಿನ ರಘುನಾಥ(42), ವಸಂತ ಹಳೆನೇರೆಂಕಿ(30), ರವಿ ಕೊಂಡಾಡಿಕೊಪ್ಪ(35), ಮತ್ತಪ್ಪ ಶರವೂರು(57), ಜಿನ್ನಪ್ಪ ಕೊಂಡಾಡಿಕೊಪ್ಪ(62), ಲೋಲಾಕ್ಷ ಶರವೂರು(49) ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಜುಗಾರಿ ಆಟಕ್ಕೆ ಬಳಸಿದ 12,140 ರೂ. ನಗದು ಹಾಗೂ ಎರಡು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಮೂವರು ಪರಾರಿಯಾಗಿದ್ದಾರೆ. ದಾಳಿಯಲ್ಲಿ ಎಎಸ್‍ಐ ಚಂದ್ರಶೇಖರ್ ಹಾಗೂ ಪೋಲೀಸ್ ಸಿಬಂದಿಗಳಾದ ಮೋನಪ್ಪ ಗೌಡ, ಶಿವಪ್ರಸಾದ್ ಶರತ್, ಕೃಷ್ಣಪ್ಪ, ಚಂದನ್, ಗೋವಿಂದ್, ಸಂದೇಶ್ ಭಾಗವಹಿಸಿದ್ದರು.

Also Read  ಕಡಬದಲ್ಲಿ ಈ ವಾರವೂ ಸಂಡೇ ಲಾಕ್ ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ

error: Content is protected !!
Scroll to Top