ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೆರೆನೀರು ► ರಸ್ತೆ ತಡೆಯಿಂದಾಗಿ ಕಿ.ಮೀ. ಗಟ್ಟಲೆ ಸಾಲುಗಟ್ಟಿ‌ ನಿಂತ ವಾಹನಗಳು ► ಉದನೆ ಪೇಟೆ, ಅಡ್ಡಹೊಳೆ ಕಾಲನಿ ಜಲಾವೃತ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.09. ನಿನ್ನೆಯಿಂದ‌ ಸುರಿಯುತ್ತಿರುವ ಭಾರೀ ಮಳೆಗೆ ನೆರೆ ನೀರಿನ ಪ್ರವಾಹ ಹೆಚ್ಚಾಗಿದ್ದು, ನೆರೆ‌ ನೀರು ರಾಷ್ಟ್ರೀಯ ಹೆದ್ದಾರಿಗೆ ಬಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ತಡೆ ಉಂಟಾಗಿದೆ.

ಕೆಂಪುಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಉದನೆ ಪೇಟೆ, ಶಿರಾಡಿ ಹಾಗೂ ನೇಲ್ಯಡ್ಕ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೆರೆ ನೀರು ನುಗ್ಗಿದೆ. ಪರಿಣಾಮ ವಾಹನಗಳು ಮುಂದೆ ಸಾಗಲಾರದೆ ಅಲ್ಲಲ್ಲಿ ಕಿ.ಮೀ. ಗಟ್ಟಲೆ ಸಾಲು ನಿಂತಿವೆ. ಅಡ್ಡಹೊಳೆ ಬಳಿ ದಲಿತ ಕಾಲೋನಿಗೆ ನೆರೆ ನೀರು ನುಗ್ಗಿದೆ ಎನ್ನಲಾಗಿದೆ.

Also Read  ಮಾಜಿ ಸಿಎಂ ಸಿದ್ದುಗೆ ಕೊರೋನಾ ನೆಗೆಟಿವ್ ➤ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್

error: Content is protected !!
Scroll to Top