ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ► ಸಬಳೂರು ಶಾಲೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ

ಕಡಬ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ದಿ ಇಲಾಖೆಯ ಘಟಕ 5 ರ ವತಿಯಿಂದ ಪುತ್ತೂರು ತಾಲೂಕು ಕೊೈಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಘಟಕದ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಮುಖ್ಯಗುರು ವಾರಿಜ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಮಾರು 75 ಕ್ಕೂ ಹೆಚ್ಚು ಗೇರು ಗಿಡ ಇತರೆ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು. ಜಲಾನಯನ ಇಲಾಖಾ ಘಟಕ 5 ರ ನಾಯಕ ಚಿದಾನಂದ ಪಾನ್ಯಾಲು, ಗುತ್ತಿಗೆದಾರ ಹನೀಫ್ , ಶಿಕ್ಷಕ ಶೇಖರ ಬಲ್ಯ ಮೊದಲಾದವರು ಉಪಸ್ಥಿತರಿದ್ದರು.

Also Read  ಪ್ರಾಮಾಣಿಕ ಗೃಹರಕ್ಷಕರೇ ದೇಶದ ನಿಜವಾದ ಆಸ್ತಿ- ಡಾ|| ಚೂಂತಾರು

error: Content is protected !!
Scroll to Top