ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜು.18. ಇನ್ಮುಂದೆ ಕರಾವಳಿಯ ಕೆಲವು ಗ್ರಾಮಗಳಿಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್‌ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಪವರ್‌ ಕಟ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ.

ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ರವರ ‘ಮಾದರಿ ವಿದ್ಯುತ್‌ ಗ್ರಾಮ’ ಆಶಯದಂತೆ ದಕ್ಷಿಣ ಕನ್ನಡ ಜಿಲ್ಲೆಯ 35 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತೀ ಗ್ರಾಮಕ್ಕೆ ಗರಿಷ್ಠ 40 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಮಾದರಿ ಗ್ರಾಮ ಯೋಜನೆ ಅನುಷ್ಠಾನದ ಗುರಿ ಹೊಂದಲಾಗಿದೆ. ಈ ಗ್ರಾಮಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್‌ ಲೈನ್, ವಿದ್ಯುತ್‌ ಕಂಬ, ವಿದ್ಯುತ್‌ ಪರಿವರ್ತಕ ಇತ್ಯಾದಿಗಳನ್ನು ಸರಿಪಡಿಸಿ ಅಪಘಾತ ರಹಿತ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಯೋಜನೆಯಡಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳ ವಿವರ ಈ ಕೆಳಗಿನಂತಿವೆ.

ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ: ತೆಂಕ ಮಿಜಾರು, ಕಲ್ಲಮುಂಡ್ಕೂರು, ಕಿನ್ನಿಗೋಳಿ, ಹಳೆಯಂಗಡಿ, ಬಜ್ಪೆ

Also Read  ?ವಿಟ್ಲ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಪ್ರಕರಣ ➤ ಆರೋಪಿ ಅರೆಸ್ಟ್

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ: ಬಡಗ ಉಳಿಪಾಡಿ, ಕಂದಾವರ, ಕೆಲಿಂಜಾರ್‌, ಮೂಳೂರು, ಮುತ್ತೂರು

ಮಂಗಳೂರು ವಿಧಾನ ಸಭಾ ಕ್ಷೇತ್ರ: ಸಜೀಪ ನಡು, ನರಿಂಗಾನ, ಹರೇಕಳ, ಪಾವೂರು, ಕಿನ್ಯಾ

ಪುತ್ತೂರು ವಿಧಾನಸಭಾ ಕ್ಷೇತ್ರ: ಬಲ್ನಾಡು, ನರಿಮೊಗ್ರು, ಶಾಂತಿಗೋಡು, ಕೊಡಿಪ್ಪಾಡಿ, 34- ನೆಕ್ಕಿಲಾಡಿ

ಸುಳ್ಯ ವಿಧಾನ ಸಭಾ ಕ್ಷೇತ್ರ: ಚಾರ್ವಾಕ, ಇಚಿಲಂಪಾಡಿ, ಬಂಟ್ರ, ಮಂಡೆಕೋಲು, ಮರ್ಕಂಜ

ಬಂಟ್ವಾಳ ವಿಧಾನ ಸಭಾ ಕ್ಷೇತ್ರ: ಸಜಿಪ ಮುನ್ನೂರು, ಕಪೆì, ಕಾವಳ ಪಡೂರು, ಕೊಳ್ನಾಡು, ವಿಟ್ಲ ಪಡ್ನೂರು

Also Read  ಉದ್ಯಮ ನೋಂದಣಿ ಪ್ರಮಾಣ ಪತ್ರ - ಕಡ್ಡಾಯ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ: ಉಜಿರೆ, ತಣ್ಣೀರು ಪಂಥ, ಕೊಕ್ಕಡ, ಹೊಸಂಗಡಿ, ನಾರಾವಿ.

error: Content is protected !!
Scroll to Top