ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟೊ ಲೇಸ್ – ಸನ್ಮಾನ

ಕಡಬ: ಹಿರಿಯರ ಮಾರ್ಗದರ್ಶನದೊಂದಿಗೆ ನಾವೆಲ್ಲರೂ ಮುಂದುವರಿಯಬೇಕು. ಆಧುನಿಕತೆಯ ಅಬ್ಬರದಲ್ಲಿ ನಮ್ಮ ಸಾಮಾಜಿಕ, ಸಾಂಸ್ಕøತಿಕ ಪಾರಂಪರಿಕ ಕಟ್ಟುಕಟ್ಟಲೆಗಳಿಗೆ ಧಕ್ಕೆಯಾಗದಂತೆ, ಯುವ ಪೀಳಿಗೆಗೆ ನಮ್ಮತನದ ಕುರಿತು ತಿಳಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು.

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಹಾಗೂ ಕಾಣಿಯೂರು ಪಿಂಗಾರ ತುಳು ಕೂಟ ಆಶ್ರಯದಲ್ಲಿ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಆಟಿದ ಕೂಟೊ ಲೇಸ್ ಕಾರ್ಯಕ್ರಮದಲ್ಲಿಅತಿಥಿಯಾಗಿ ಮಾತನಾಡಿದರು. ತುಳುನಾಡಿನ ಪರಂಪರೆಗೆ ತನ್ನದೆ ಆದ ವೈಜ್ಞಾನಿಕತೆಯಿದೆ. ನಮ್ಮ ಹಿರಿಯರು ಆಚರಿಸುಕೊಂಡು ಬರುತ್ತಿದ್ದ ವಿವಿಧ ಆಚರಣೆಗಳ ಮೂಲಸ್ವರೂಪ ಕೆಡದಂತೆ ಯುವಪೀಳಿಗೆ ಅನುಕರಿಸಿದಾಗ ನಮ್ಮ ಸಂಸ್ಕøತಿ ಜೀವಂತವಾಗಿರುತ್ತದೆ ಎಂದರು.  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಕುದ್ಕಾಡಿ ವಿಶ್ವನಾಥ ರೈ ಮಾತನಾಡಿ, ಇಂಗ್ಲೆಂಡಿನಲ್ಲಿ ಬಸವೇಶ್ವರರ ಪ್ರತಿಮೆಯನ್ನು ಪ್ರತಿಷ್ಠಾಪಿಸುವಲ್ಲಿ ಮುತುವರ್ಜಿ ವಹಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ನಮಗೆಲ್ಲರಿಗೂ ಹೆಮ್ಮೆಯನ್ನುಂಟು ಮಾಡಿದೆ. ಬಸವೇಶ್ವರರ ಕುರಿತಾಗಿ ನಾನು ಬರೆದ ಪುಸ್ತಕವನ್ನು ಮೋದಿಯವರಿಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಿದರು.

Also Read  ಅ.02ರಂದು ಗಾಂಧಿ ಜಯಂತಿ ಹಾಗೂ ವರ್ಷದ ವ್ಯಕ್ತಿ ಗೌರವ ಪ್ರಶಸ್ತಿ ಪ್ರದಾನ

ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು ಮಾತನಾಡಿ, ತುಳುನಾಡಿನ ಆಚರಣೆಯಲ್ಲಿರುವ ಸಂಪ್ರದಾಯಗಳ ಮಹತ್ವವನ್ನು ತಿಳಿದು, ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು. ಕಾಣಿಯೂರು ಪಿಂಗಾರ ತುಳುಕೂಟೊದ ಅಧ್ಯಕ್ಷ ಜನಾರ್ದನ ಆಚಾರ್ಯ ಮಾತನಾಡಿದರು. ಬಾಲವನ ಈಜುಕೊಲ ಸಮಿತಿ ಸದಸ್ಯೆ ಪ್ರತಿಮಾ ಹೆಗ್ಡೆ, ಉಪನ್ಯಾಸಕಿ ಅನುಪಮ ಗಣೇಶ್ ರೈ ಆಟಿ ತಿಂಗಳ ಕುರಿತಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ಪ್ರಗತಿ ವಿದ್ಯಾಸಂಸ್ಥೆಯ ಟ್ರಸ್ಟಿ ವೃಂದಾ ಜೆ. ರೈ ಉದ್ಘಾಟಿಸಿದರು. ಸಂಚಾಲಕ ಜಯಸೂರ್ಯ ರೈ ಮಾದೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀಕರಿಯಪ್ಪ ರೈ ಮಾದೋಡಿ, ನಾಟಿ ವೈದ್ಯ ಜಿನ್ನಪ್ಪ ಗೌಡ ಕಳುವಾಜೆ, ಸಂಸ್ಥೆಯ ಆಡಳಿತ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಕೋಶಾಧಿಕಾರಿ ಉದಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಮೇಶ್ ಬೆಟ್ಟ, ಉಪಾಧ್ಯಕ್ಷೆ ಸೌಮ್ಯ ಲಕ್ಷ್ಮೀ, ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ಸುಜಿತ್ ರೈ ಪಟ್ಟೆ, ಅಣ್ಣು ಆಚಾರ್ಯ ಅಬೀರ ಉಪಸ್ಥಿತರಿದ್ದರು. ಹಳೆ ಕಾಲದ ಮನೆಪಯೋಗಿ ವಸ್ತಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕಂಡುಬಂತು. ಮಧ್ಯಾಹ್ನದ ಭೋಜನಕ್ಕೆ ಆಟಿ ತಿಂಗಳ ವಿಶೇಷ ತಿನಿಸುಗಳಿತ್ತು. ಮುಖ್ಯಶಿಕ್ಷಕ ಗಿರಿಶಂಕರ ಸುಲಾಯ ಪ್ರಾಸ್ತವಿಸಿದರು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿದರು. Àರಸ್ವತಿ ಎಂ. ವಂದಿಸಿದರು. ಶಿಕ್ಷಕಿ ವಿನಯ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top