ಕಡಬ: ವಿದ್ಯಾರ್ಥಿಯ ಪ್ರಾಥಮಿಕ ಹಂತದಲ್ಲಿ ಪ್ರತಿಭೆಗಳನ್ನು ಕ್ರೋಡಿಕರಿಸಿ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಕಾರಂಜಿಯನ್ನು ಅಯೋಜಿಸಲಾಗುತ್ತದೆ. ಈ ಅವಕಾಶದಿಂದ ವಿದ್ಯಾರ್ಥಿಯ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಯ ಸರ್ವೋತೊಮುಖ ಬೆಳೆವಣಿಗೆಯಲ್ಲಿ ಶಿಕ್ಷಕರ ಪೋಷಕರು ಪ್ರಮುಖ ಪಾತ್ರವಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಹೇಳಿದರು.
ಅವರು ರಾಮಕುಂಜ ಗ್ರಾಮದ ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಕೇವಲ ಪಠ್ಯ ವಿಷಯಕ್ಕೆ ಸೀಮಿತವಾಗಬಾರದು. ಪಠ್ಯದ ಅದರಾಚೆಗಿನ ಅರೋಗ್ಯಕರ ವಿಷಯಗಳು ಬಹಲಷ್ಟಿದೆ. ಇದನೆಲ್ಲ ವಿದ್ಯಾರ್ಥಿಗೆ ಬೋದಿಸಿ ಕಾರ್ಯರೂಪಕ್ಕೆ ತರುವಲ್ಲಿ ಶಿಕ್ಷಕರು ಮುತುವರ್ಜಿವಹಿಸಬೇಕು ಎಂದರು. ರಾಮಕುಂಜ ಗ್ರಾಮ ಪಂಚಾಯಿತಿ ಅದ್ಯಕ್ಷ ಪ್ರಶಾಂತ್ ಆರ್ ಕೆ ಅದ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಕಾರಿ ಶಾಲೆಗಳ ಉಳಿವಿಗೆ ಸಾಕಷ್ಟು ಅಭಿವೃದ್ದಿ ಯೋಜನೆಗಳನ್ನು ಹಾಕಿಕೊಂಡಿದೆ. ಖಾಸಗಿ ಶಾಲೆಗೆಳಿಗೆ ಪೈಪೋಟಿ ನೀಡುವ ಸಲುವಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದೆ. ಬದಲಾದ ಶಿಕ್ಷಣ ಪದ್ದತಿಯಲ್ಲಿ ವಿದ್ಯಾರ್ಥಿಗೆ ಪಠ್ಯ ಮಾತ್ರವಲ್ಲದೆ ಪಠೈತರ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಕ್ಕೆ ವೇದಿಕೆ ದೊರೆಯುತ್ತಿದೆ. ಸದುಪಯೋಗಪಡಿಸಿಕೊಂಡು ಅಭ್ಯಸಿದರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ, ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷ ಅಬ್ದುಲ್ ರಝಾಕ್ , ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯೆ ಜೋಹರಾ , ನಿವೃತ್ತ ಶಿಕ್ಷಕಿ ರೇವತಿ ಶುಭಹಾರೈಸಿದರು. ಬದ್ರಿಯಾ ಮಸೀದಿ ಅದ್ಯಕ್ಷ ಅಬ್ದುಲ್ ರಫೀಕ್, ಬಿ ಆರ್ ಪಿ ಸೀತಮ್ಮ ಉಪಸ್ಥಿತರಿದ್ದರು. ಸಿ ಆರ್ ಪಿ ಗಿರೀಶ್ ಬಿಲ್ಲವ ಪ್ರಸ್ತಾವಿಸಿದರು. ಮುಖ್ಯಶಿಕ್ಷಕ ಮಹೇಶ್ ಸ್ವಾಗತಿಸಿದರು. ಶಿಕ್ಷಕಿ ಜಾನಕಿ ವಂದಿಸಿದರು. ಶಿಕ್ಷಕಿ ವನಿತಾ ನಿರೂಪಿಸಿದರು.