ಹೊಸ್ಮಠ ಸೇತುವೆ ಮುಳುಗಡೆ ► ಉಪ್ಪಿನಂಗಡಿ – ಕಡಬ ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಕಡಬ, ಆ.08. ಉಪ್ಪಿನಂಗಡಿ – ಕಡಬ ಸಂಪರ್ಕ ರಸ್ತೆಯ ಹೊಸ್ಮಠ ಮುಳುಗು ಸೇತುವೆಯು ಬುಧವಾರ ಬೆಳಿಗ್ಗೆಯಿಂದ ಮುಳುಗಡೆಗೊಂಡಿದ್ದು, ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಕಡಬ ಪರಿಸರದಲ್ಲಿ ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಮಳೆ‌ ಸುರಿದಿದ್ದು, ಬುಧವಾರ ಬೆಳಿಗ್ಗೆ ಹೊಸ್ಮಠ ನದಿಯಲ್ಲಿ ನೀರಿನ ಪ್ರಮಾಣ ಅಧಿಕಗೊಂಡು ಸೇತುವೆಯ ಮೇಲೆ ಹರಿಯಲಾರಂಭಿಸಿದೆ. ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ತಡೆಯುಂಟಾಗಿದೆ. ಇದರಿಂದಾಗಿ ಉಪ್ಪಿನಂಗಡಿ ಹಾಗೂ ಕಡಬ ಕಡೆಗೆ ತೆರಳಬೇಕಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಪರದಾಡುವಂತಾಯಿತು.

Also Read  ಮಡಿಕೇರಿ : ಕೊಡಗಿನಲ್ಲಿ ಮತ್ತಿಬ್ಬರಿಗೆ ಕೊರೊನಾ

error: Content is protected !!
Scroll to Top