ರಾಮಕುಂಜ: ಅಕ್ರಮ ಮರ ಸಾಗಾಟ ಪತ್ತೆ ► ಪಿಕಪ್ ಸಹಿತ ಮರ ವಶಕ್ಕೆ, ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಆ.07. ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಕಡಬ ಪೊಲೀಸರು ಪಿಕಪ್‌ ಸಹಿತ ಮರದ ತುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಎಎಸ್ಐ ಕೊರಗಪ್ಪ, ಹೆಡ್ ಕಾನ್ಸ್‌ಟೇಬಲ್ ಮೋಹನ ಹಾಗೂ ಸಿಬ್ಬಂದಿಗಳು ರಾಮಕುಂಜ ಪಂಚಾಯತ್ ಬಳಿ ಕಾಯುತ್ತಿದ್ಢಾಗ ಬಂದ ಪಿಕಪ್ ವಾಹನವನ್ನು ನಿಲ್ಲಿಸಲು ತಿಳಿಸಿದಾಗ ವಾಹನವನ್ನು ಸ್ವಲ್ಪ ಮುಂದೆ ಕೊಂಡುಹೋಗಿ ನಿಲ್ಲಿಸಿ ಚಾಲಕ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ನಂತರ ಪಿಕಪ್ ವಾಹನವನ್ನು ಪರಿಶೀಲಿಸಲಾಗಿ ಅದರಲ್ಲಿ ವಿವಿಧ ಜಾತಿಯ ಮರದ ಸುಮಾರು 38 ಲಾಗ್ ಗಳಿದ್ದು, ವಶಪಡಿಸಿದ ಮರ ಹಾಗೂ ಪಿಕಪ್ ವಾಹನದ ಒಟ್ಟು ಮೌಲ್ಯ ಸುಮಾರು 1 ಲಕ್ಷದ 75 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಕ್ರ ನಂ 157/18.ಕಲಂ 71(a) ಕೆ.ಎಫ್ ಆಕ್ಟ್. 145 ಕೆ.ಎಫ್.ರೂಲ್ಸ್’ .379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Also Read  ಕೆವೈಸಿ ಹೆಸರಿನಲ್ಲಿ 1.93 ಲಕ್ಷ ರೂ. ವಂಚನೆ- ದೂರು ದಾಖಲು

error: Content is protected !!
Scroll to Top