ಆ.12 : ಚೆನ್ನಾವರದಲ್ಲಿ ಆಟಿದ ಕೂಟ-ಜನಪದ ಗೊಬ್ಬುಲು

newskadaba ಸವಣೂರು : ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದಲ್ಲಿ ಚೆನ್ನಾವರ ಅಭ್ಯುದಯ ಯುವಕ ಮಂಡಲದ ಆಶ್ರಯದಲ್ಲಿ 2ನೇ ವರ್ಷದ ಆಟಿದ ಕೂಟ-ಜನಪದಗೊಬ್ಬುಲು ಕ್ರೀಡಾಕೂಟವು ಪಾಲ್ತಾಡಿ ಗ್ರಾಮದ ಚೆನ್ನಾವರ ಕೆಸರುಗದ್ದೆಯಲ್ಲಿ ಆ.12ರಂದು ನಡೆಯಲಿದೆ.
ಕ್ರೀಡಾಕೂಟಕ್ಕೆ ಬೆಳಗ್ಗೆ ಚೆನ್ನಾವರ ಉಳ್ಳಾಕುಕುಲು ಸೇವಾ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಾಲನೆ ನೀಡುವರು.ಅತಿಥಿಗಳಾಗಿ ಸಾಮಾಜಿಕ ಮುಂದಾಳು ಬಾಲಕೃಷ್ಣ ರೈ ,ಪ್ರಗತಿಪರಕೃಷಿಕ ನಾರಾಯಣ ರೈ ಚೆನ್ನಾವರ ಪಟ್ಟೆ , ಚೆನ್ನಾವರ ಶಾಲಾ ಮುಖ್ಯಗುರು ಶಾಂತಾಕುಮಾರಿ ಎನ್ ,ಸವಣೂರು ಗ್ರಾ.ಪಂ.ಸದಸ್ಯೆ ಜಯಂತಿ ಮಡಿವಾಳ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮ
ಮಧ್ಯಾಹ್ನ 12.00ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಸವಣೂರು ಬೊಳ್ಳಿಬೊಲ್ಪು ತುಳುಕುಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಉದ್ಘಾಟಿಸುವರು.ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಹಿಸುವರು.
ಅತಿಥಿಗಳಾಗಿ ಕಡಬ ನವಜ್ಯೋತಿ ಸ್ಪೋಟ್ಸ್ ಕ್ಲಬ್‍ನ ಅಧ್ಯಕ್ಷ ಕಿಶನ್ ಕುಮಾರ್ ರೈ, , ಬೆಳ್ಳಾರೆ ಟೌನ್ ರೋಟರೀಕ್ಲಬ್ ನ ನಿರ್ದೇಶಕ ವೆಂಕಪ್ಪ ಗೌಡ ನಾರ್ಕೋಡು ,ಯುವ ಮುಂದಾಳು ಸಹಜ್ ರೈ ಬಳಜ್ಜ, ಚೆನ್ನಾವರ ಮುಹಿಯ್ಯುದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷ ಸಿ.ಎ.ಕರೀಂ, ,ಸುಳ್ಯ ಗಾಂ„ನಗರ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಅಬ್ದುಲ್ ಸಮದ್ ನೆಕ್ಕರೆ ,ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘದ ಕಾರ್ಯದರ್ಶಿ ಉದಯ ಬಿ.ಆರ್,ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು,ಕಾರ್ಯದರ್ಶಿ ಗುರುಪ್ರಿಯಾ ನಾಯಕ್,ನೆಹರು ಯುವ ಕೇಂದ್ರದ ಸಂಯೋಜಕಿ ಜಿಸ್ಮಿತಾ ಕೆ.ಆರ್ ಉಪಸ್ಥಿತರಿರುವರು.
ಪ್ರತಿಭಾ ಪುರಸ್ಕಾರ
ಇದೇ ಸಂಧರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಗುವುದು.

Also Read  ಲಾಕ್‍ಡೌನ್ ನಿಯಮ ಪಾಲನೆಯ ಜವಾಬ್ದಾರಿ ಪೊಲೀಸರಿಗೆ ಮಾತ್ರವೇ.? ➤ ಎಸಿ ಸೂಚನೆಯಂತೆ ಇಂದಿನಿಂದ ಅಲರ್ಟ್ ಆಗ್ತಾರಾ ಅಧಿಕಾರಿಗಳು..?

ಕೆಸರುಗದ್ದೆ ಸ್ಪರ್ಧೆಗಳು
ಕೆಸರುಗದ್ದೆ ಜನಪದ ಕ್ರೀಡಾಕೂಟದಲ್ಲಿ ಪುರುಷರಿಗೆ ನಡೆಯುವ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ 2000 ನಗದು ಹಾಗೂ ಶಾಶ್ವತ ಫಲಕ ,ದ್ವಿತೀಯ 1000 ನಗದು ಹಾಗೂ ಶಾಶ್ವತ ಫಲಕ ,ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ 4000ನಗದು ಹಾಗೂ ದ್ವಿತೀಯ 3000 ನಗದು ಹಾಗೂ ಶಾಶ್ವತ ಫಲಕ ,ತೃತೀಯ 2000 ಹಾಗೂ ಶಾಶ್ವತ ಫಲಕ,ಚತುರ್ಥ 1000 ನಗದು ಹಾಗೂ ಶಾಶ್ವತ ಫಲಕ ಉಳಿದಂತೆ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ, ಕೆಸರುಗದ್ದೆ ಓಟ ,ತುಳು ಜಾನಪದ ಸ್ಪರ್ದೆ ,ತುಳು ಪಾಡ್ದನ ಸ್ಪರ್ಧೆ ಮತ್ತು ಶಾಲಾ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ತುಳು ರಸಪ್ರಶ್ನೆ ,ತುಳು ಭಾಷಣ ,ಜಾನಪದ ಸ್ಪರ್ಧೆ ,ನಿ„ ಶೋಧ ಮೊದಲಾದ ಸ್ಪರ್ಧೆಗಳು ನಡೆಯಲಿದೆ.
ಆಟಿದ ತೆನಸ್,ವನಸ್
ಆಟಿತಿಂಗಳ ವಿಶೇಷ ಖಾದ್ಯಗಳನ್ನೊಳಗೊಂಡ ಮಧ್ಯಾಹ್ನದ ಆಟಿದ ತೆನಸ್ ,ವನಸ್ ಸಹಭೋಜನ ನಡೆಯಲಿದೆ.ಇದರಲ್ಲಿ ವಿಶೇಷವಾಗಿ ಆಟಿ ತಿಂಗಳಿನಲ್ಲಿ ಮಾಡಲಾಗುವ ಖಾಧ್ಯಗಳು ಇರಲಿದೆ.

Also Read  ಕಡಬ ಹೋಬಳಿ ಮಟ್ಟದ ಕೃಷಿ ಅಭಿಯಾನ ಉದ್ಘಾಟನೆ

ಸಮಾರೋಪ
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ವಹಿಸುವರು.ರೋಟರೀ ಕ್ಲಬ್ ಬೆಳ್ಳಾರೆ ಟೌನ್ ಇದರ ಸ್ಥಾಪಕಾಧ್ಯಕ್ಷ ಶ್ಯಾಮಸುಂದರ ರೈ ಕೆರೆಮೂಲೆ ಬಹುಮಾನ ವಿತರಿಸುವರು.
ಅತಿಥಿಗಳಾಗಿ ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ,ಪ್ರಗತಿಪರ ಕೃಷಿಕ ಕೃಷ್ಣಪ್ಪ ಪೂಜಾರಿ ಚೆನ್ನಾವರ , ಸವಣೂರು ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಯಾನಂದ ಮಾಲೆತ್ತಾರು ,ಮುಕ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ,ಪಾಲ್ತಾಡು ನ್ಯೂಬ್ರದರ್ಸ್‍ನ ಗೌರವಾಧ್ಯಕ್ಷ ಸುನೀಲ್ ರೈ ಪಾಲ್ತಾಡು,ಅಧ್ಯಕ್ಷ ಹನೀಫ್,ಸಿವಿಲ್ ಕಂಟ್ರಾಕ್ಟರ್ ಶರತ್ ಕುಮಾರ್ ಮಾಡಾವು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top