ಕಳಾರ: ವಿದ್ಯುತ್ ಪ್ರವಹಿಸಿ ಎತ್ತು ಸಾವು

(ನ್ಯೂಸ್ ಕಡಬ) newskadaba.com ಕಡಬ, ಆ.05. 33 ಕೆವಿ ವಿದ್ಯುತ್ ತಂತಿಗೆ ಹಕ್ಕಿಯೊಂದು ತಾಗಿದ ಪರಿಣಾಮ ವಿದ್ಯುತ್ ಗ್ರೌಂಡ್ ಆಗಿ ತಂತಿಯಡಿ ಮೇಯುತ್ತಿದ್ದ ಎತ್ತೊಂದು ವಿದ್ಯುತ್ ಶಾಕ್‍ನಿಂದ ಸತ್ತುಹೋಗಿರುವ ಘಟನೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಶನಿವಾರದಂದು ನಡೆದಿದೆ.

ಸ್ಥಳೀಯ ನಿವಾಸಿ ಪುತ್ತುಮೋನು ಎಂಬವರಿಗೆ ಸೇರಿದ ಎತ್ತಿನ ಆರ್ಭಟವನ್ನು ಕೇಳಿದ ಮುಸ್ತಫಾ ಎಂಬವರು ಗ್ರಾ.ಪಂ.ಸದಸ್ಯ ಹಾಜಿ ಹನೀಫ್ ಕೆ.ಎಂ.ರವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ ಹನೀಫ್‍ರವರು ಮೆಸ್ಕಾಂ ಇಲಾಖಾ ಎ.ಇ.ಇ ಸಜಿ ಕುಮಾರ್ ಮತ್ತು ಎ.ಇ ಸತ್ಯನಾರಾಯಣರವರಿಗೆ ಹಾಗೂ ಕಡಬ ಪಶು ಚಿಕಿತ್ಸಾ ಕೇಂದ್ರದ ವೈಧ್ಯಾಧಿಕಾರಿ ಧರ್ಮಪಾಲರವರಿಗೆ ನೀಡಿದ ಮಾಹಿತಿಯಂತೆ ಮೆಸ್ಕಾಂ ಎ.ಇ.ಇ ಸಜಿ ಕುಮಾರ್‍ರವರು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತಾರೆ. ಸ್ಥಳಕ್ಕಾಗಮಿಸಿದ ಪಶು ಚಿಕಿತ್ಸಾ ಹಿರಿಯ ಪರಿವೀಕ್ಷಕ ಡಾ.ರವೀಂದ್ರರವರು ಎತ್ತಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೆಸ್ಕಾಂನ ತನಿಖಾ ದಳದವರು ಬಂದು ಮಹಜರು ತಯಾರಿಸಿ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ವರದಿ ಸಲ್ಲಿಸಿದ್ದಾರೆ.

Also Read  ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ ► ಉಳಿದ ಆರೋಪಿಗಳ ಬಂಧನಕ್ಕೆ ಆಡಳಿತ ಮಂಡಳಿ ಅಗ್ರಹ

error: Content is protected !!
Scroll to Top