ಕೊಣಾಜೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ► ಆರೋಪಿ ತಂದೆ ಮತ್ತು ಬಾಡಿಗೆ ಮನೆಯ ಮಾಲಕನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.04.‌ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆ ಸೇರಿದಂತೆ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಮೂಲದ ಕುಟುಂಬವೊಂದು ಕಳೆದ ಕೆಲವು ವರ್ಷಗಳಿಂದ ಕೊಣಾಜೆ ಠಾಣಾ ವ್ಯಾಪ್ತಿಯ ಕಿಲ್ಲೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕುಟುಂಬದ ಯಜಮಾನ ಹಾಗೂ ಬಾಡಿಗೆ ಮನೆಯ ಮಾಲಕ ತನ್ನ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದಲ್ಲದೆ ಅತ್ಯಾಚಾರ ಎಸಗಿದ್ದರು. ತನ್ನ ತಂದೆಯು ಲೈಂಗಿಕ ಕಿರುಕುಳ ನೀಡುತ್ತಿರುವ ವಿಚಾರವನ್ನು ಬಾಲಕಿಯು ತನ್ನ ಚಿಕ್ಕಮ್ಮನಲ್ಲಿ ದೂರಿದ್ದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಬಾಗಲಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

Also Read  ಕಡ್ಯ ಕೊಣಾಜೆ - ರೆಂಜಿಲಾಡಿ ರಸ್ತೆಗೆ ಆಗಬೇಕಿದೆ ಕಾಯಕಲ್ಪ ➤ ಡಾಮರೀಕರಣ ಆಗಬೇಕಿದೆ 2 ಕೀ.ಮೀ. ರಸ್ತೆ; ದುರಸ್ಥಿಗೆ ಆಗ್ರಹ!

ಬಳಿಕ ಪ್ರಕರಣವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿ ಮಂಗಳೂರಿನ ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಕೊಣಾಜೆ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಬಾಲಕಿಯನ್ನು ಕೌನ್ಸಿಲಿಂಗ್ ನಡೆಸಿದಾಗ ತನ್ನ ತಂದೆ ಹನುಮಂತ ಲಗ್ಗಾಪುರ ಹಾಗೂ ಬಾಡಿಗೆ ಮನೆಯ ಮಾಲಕ ಕಿಲ್ಲೂರಿನ ವಿವೇಕ್ ಶೆಟ್ಟಿಯ ಬಗ್ಗೆ ಮಾಹಿತಿ ನೀಡಿದ್ದಳೆನ್ನಲಾಗಿದೆ. ಆಕೆ ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಕೊಣಾಜೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top