ಮಂಗಳೂರು ಮತ್ತು ಕಡಬ ವಲಯ ಪರಿವಾರ ಬಂಟರ ಸಂಘ ► ಬೀರಂತಡ್ಕದಲ್ಲಿ ಆಟಿ ಆಚರಣೆ ಹಾಗೂ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, ಆ.02. ಕುಂತೂರು ಪದವಿನ ಬೀರಂತಡ್ಕ ಬಲಮುರಿ ಶ್ರೀ ಮಹಾಗಣಪತಿ ಶ್ರೀ ರಾಜನ್ ದೈವಸ್ಥಾನದ ವಠಾರದಲ್ಲಿ ಮಂಗಳೂರು ಪರಿವಾರ ಬಂಟರ ಸಂಘ, ಕಡಬ ವಲಯ ಪರಿವಾರ ಬಂಟರ ಸಂಘ ಹಾಗೂ ಮಹಿಳಾ ಪರಿವಾರ ಬಂಟರ ಸಂಘದ ವತಿಯಿಂದ ಜು.29ರಂದು ಆಟಿ ಆಚರಣಾ ಕಾರ್ಯಕ್ರಮ ಮತ್ತು ಕ್ರೀಡಾಕೂಟ ನಡೆಯಿತು.


ಕಾರ್ಯಕ್ರಮವನ್ನು ಪರಿವಾರ ಬಂಟರ ಹಿರಿಯರಾದ ಸೀತಾ ಆರ್.ನಾೈಕ್ ಬೀರಂತಡ್ಕರವರು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಟಿ ಆಚರಣೆ ಸಂಪ್ರದಾಯದ ಕಲೆಯಾಗಿದೆ. ಆಟಿ ಅಮವಾಸ್ಯೆಯಂದು ನಾವು ಪಾಲೆ ಮರದ ಮದ್ದನ್ನು ಕುಡಿಯುತ್ತಿದ್ದು ಸುಮಾರು 162 ನಮೂನೆಯ ಕಾಯಿಲೆಗಳಿಂದ ಮುಕ್ತಿಹೊಂದಲು ಈ ಮದ್ದು ಪ್ರಾಮುಖ್ಯವಾಗಿದ್ದು ಇದರ ಮಹತ್ವ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ, ಸುಮಾರು 1600 ವರ್ಷಗಳ ಪ್ರಾಚೀನ ಕಾಲದಿಂದಲೇ ಆಟಿ ತಿಂಗಳ ಮಹತ್ವ ವಾಸ್ತು ಚರಿತ್ರೆಯಲ್ಲಿಯೇ ದಾಖಲಾಗಿದ್ದು ಎಲ್ಲರೂ ಈ ತಿಂಗಳ ಮಹತ್ವವನ್ನು ಅರಿತುಕೊಂಡು ಹೆಚ್ಚಿನ ಕಾರ್ಯಕ್ರಮಗಳನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತಿದೆ. ಇಲ್ಲಿ ಕೂಡಾ ತಮ್ಮ ಸಮಾಜದವರು ಎಲ್ಲರೂ ಸೇರಿಕೊಂಡು ಆಟಿ ಆಚರಣೆಯೊಂದಿಗೆ ಆಟೋಟ ಸ್ಪರ್ದೆಗಳನ್ನು ಇಟ್ಟುಕೊಂಡಿರುವುದು ಶ್ಲಾಘನೀಯ ಇದರಿಂದ ಸಮಾಜದ ಒಗ್ಗಟ್ಟು ಬೆಳೆಯಲಿ ಎಂದು ಶುಭಹಾರೈಸಿದರು.


ಪದವು ಬೀರಂತಡ್ಕ ರಸ್ತೆ ಅವ್ಯವಸ್ಥೆಯ ಬಗ್ಗೆ ಅಲ್ಲಿಯ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಮೀರಾ ಸಾಹೇಬ್‍ರವರು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಈ ರಸ್ತೆಯ ದುಸ್ತಿತಿ ಬಗ್ಗೆ ಮನವಿ ನೀಡಿದ್ದೇನೆ, ಆದರೆ ಈಗ ಇಲ್ಲಿ ಈ ರಸ್ತೆಯಲ್ಲಿ ಬಂದು ಗಮನಿಸಿದಾಗ ಪ್ರಸಿದ್ಧ ದೇವಾಲಯವಿರುವ ಇಲ್ಲಿಗೆ ಬರುವ ರಸ್ತೆಯ ದುಸ್ಥಿತಿ ಅಧೋಗತಿಯಾಗಿದೆ, ನಿಮ್ಮ ಊರಿನವರ ಬೇಡಿಕೆಯಂತೆ ಮಾನ್ಯ ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಮನವಿ ಮೂಲಕ ಮನವರಿಕೆ ಮಾಡಿ ಆದಷ್ಟು ಶೀಘ್ರದಲ್ಲಿ ಈ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ಮೀರಾ ಸಾಹೇಬ್ ತಿಳಿಸಿದರು. ಶ್ರೀ ರಾಮ ಸೇನಾ ಪುತ್ತೂರು ಜಿಲ್ಲಾ ಪ್ರಮುಖ್ ಗೋಪಾಲ ನಾೈಕ್ ಮೇಲಿನ ಮನೆ ಮಾತನಾಡಿ ಒಗ್ಗಟ್ಟೆ ನಮ್ಮ ಸಮಾಜದ ಮೂಲವಾಗಿದ್ದು ನಾವೆಲ್ಲರೂ ಜೊತೆಯಾಗಿ ಸೇರಿಕೊಂಡು ಇಂತಹ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಮುಂದುವರಿಯುವುದಲ್ಲದೆ ನಮ್ಮ ಸಮಾಜದಲ್ಲಿ ಹಿಂದುಳಿದವರನ್ನು ಗುರುತಿಸಿ ಅವರನ್ನು ಮುಂದೆ ತರುವಲ್ಲಿ ನಾವೆಲ್ಲರೂ ಶ್ರಮಿಸಿಬೇಕು. ಇಂದು ಇಲ್ಲಿ ನಾವೆಲ್ಲರೂ ಒಟ್ಟಾಗಿ ಆಟಿ ಕಾರ್ಯಕ್ರಮ ಹಾಕಿಕೊಂಡಿದ್ದು ಮುಂದೆಯೂ ಇಂತಹ ಕಾರ್ಯಕ್ರಮಗಳ ಮೂಲಕ ನಾವು ಮುನ್ನಡೆಯಬೇಕೆಂದರು.

Also Read  ಭಾರತೀಯ ಅಂಚೆ ಇಲಾಖೆ : "ಪ್ರೀತಿಯ ಬಾಪು, ನೀವು ಅಮರ" ➤ ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ


ಸಯ್ಯದ್ ಮೀರಾ ಸಾಹೇಬರು ಹಿಂದೆ ಜಿ.ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಇಡೀ ಕಡಬ ಜಿ.ಪರಿಷತ್ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಡಾಮರೀಕರಣಗೊಳಿಸಿ ಅಲ್ಲಲ್ಲಿ ಸೇತುವೆ ನಿರ್ಮಾಣ ಮಾಡಿಸಿದ್ದರು, ಅಲ್ಲಲ್ಲಿ ಶಾಲಾ ಕಾಲೇಜು ಕೂಡಾ ನಿರ್ಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕ್ಷಿಯಾದ್ದರು. ಆದರೆ ಈಗಿನ ಜನಪ್ರತಿನಿದಿಗಳು ರಸ್ತೆ ಮಾಡಿಸುವುದು ಬಿಡಿ ಅಂದು ಡಾಮರೀಕರಣವಾದ ರಸ್ತೆಗಳಲ್ಲಿ ಡಾಮರ್ ಎದ್ದು ಹೋಗಿ ಈಚೆ ಡಾಮರೂ ಇಲ್ಲ ಆಚೆ ರಸ್ತೆಯೂ ಇಲ್ಲವಾಗಿದ್ದರೂ ಅವರಿಗೆ ಗೊತ್ತೇ ಇಲ್ಲದಂತೆ ವರ್ತಿಸುತ್ತಿದ್ದಾರೆ., ಜನಪ್ರತಿನಿದಿಯಾದವರಿಗೆ ತನ್ನ ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಲ್ಲಿಯ ಸಮಸ್ಯೆ ಗಳೇನೆಂದು ಅರಿತುಕೊಳ್ಳುವ ಜ್ಞಾನ ಬೇಕು. ನಂತರ ಆ ರಸ್ತೆಯಾಗಲೀ, ಇತರ ಯಾವುದೇ ಸಮಸ್ಯೆಯಾಗಲೀ ಅದಕ್ಕೆ ಯಾವ ರೀತಿಯಲ್ಲಿ ಹಂತ ಹಂತವಾಗಿ ತಾನು ಕ್ರಮಕೈಗೊಂಡು ಮುನ್ನಡೆಯಬೇಕೆಂದು ತಿಳಿದರೆ ಯಾವ ಕಾರ್ಯವನ್ನು ಸಾಧಿಸಲು ಸುಲಭ ಸಾದ್ಯ. ಅದು ಬಿಟ್ಟು ಬರೇ ಸಾರ್ವಜನಿಕರು ನೀಡಿದ ಅರ್ಜಿಯನ್ನು ಪಡೆದುಕೊಂಡು ನಿಮ್ಮ ಕೆಲಸ ಆಗುತ್ತದೆ ಎಂದು ಹೇಳಿ ಹೋದರೆ ಯಾವುದೂ ಪ್ರಗತಿಯಾಗುವುದಿಲ್ಲ. ಮನವಿಗಳ ಬೆನ್ನು ಹತ್ತಿ ಕೆಲಸ ಮಾಡಿದರೆ ಮಾತ್ರ ಫಲ ದೊರೆಯುತ್ತದೆ ಎಂದರು.

Also Read  ಮುಂಗಾರು ಆರಂಭವಾಗುವ ತನಕ► ಕುಮಾರಪರ್ವತ ಚಾರಣ ನಿಷೇಧ


ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ರಾಜೇಶ್ ಬೀರಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಕುಟುಂಬ ಹಾಗೂ ನಮ್ಮ ಸಮಾಜದವರನ್ನು ಅವಿರತ ದುಡಿಮೆ ಹಾಗೂ ಸಹಕಾರದಿಂದ, ಊರಿನವರ ಸಹಕಾರದೊಂದಿಗೆ ಇಲ್ಲೊಂದು ಪ್ರಸಿದ್ಧ ದೇವಾಲಯ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಮಾಡಲು ಸಾಕ್ಷಿಯಾಗಿದೆ. ಇದೇ ರೀತಿ ಈ ದೇವಸ್ಥಾನಕ್ಕೆ ಬರುವ ರಸ್ತೆಯೊಂದು ಅತೀ ಅಗತ್ಯವಾಗಿ ದುರಸ್ತಿಯಾಗಬೇಕೆಂದ ಅವರು ನಮ್ಮ ಸಮಾಜದವರ ಒಗ್ಗಟ್ಟಿನ ಸಹಕಾರದಿಂದ ಇಂದು ಈ ಒಂದು ಆಟಿ ಆಚರಣೆ ಹಾಗೂ ಕ್ರೀಡಾಕೂಟ ನಡೆಸಲು ನಮಗೆ ಶಕ್ತಿ ತುಂಬಿದಂತಾಗಿದೆ. ಮುಂದೆಯೂ ಇದೇ ರೀತಿ ತಮ್ಮೆಲ್ಲರ ಸಹಕಾರ ಇರಲಿ ಎಂದು ಆಶಿಸಿದರು. ಕಡಬ ವಲಯ ಪರಿವಾರ ಬಂಟರ ಸಂಘದ ಅಧ್ಯಕ್ಷ ಗಣೇಶ್ ಕುಂಡಿಲು ಅಧ್ಯಕ್ಷತೆ ವಹಿಸಿದ್ದರು, ಮಾಜಿ ಕಾರ್ಯದರ್ಶಿ ವಿಘ್ನೇಶ್, ನೂತನ ಕಾರ್ಯದರ್ಶಿ ನಿತಿನ್, ಮಹಿಳಾ ವೇದಿಕೆ ಅದ್ಯಕ್ಷೆ ರಚಿತಾ ನಾೈಕ್, ಹಾಗೂ ಅನುಷಾ ನಾೈಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿವಾರ ಬಂಟರ ಪ್ರಮುಖರಾದ ಬಲಮುರಿ ಶ್ರೀ ಮಹಾಗಣಪತಿ ಮತ್ತು ರಾಜನ್ ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸುಧಾಕರ್ ನಾೈಕ್ ಬೀರಂತಡ್ಕ, ಬಾಬು ನಾೈಕ್ ಬೀರಂತಡ್ಕ, ಗುಡ್ಡಪ್ಪ ನಾೈಕ್, ವಿಶ್ವನಾಥ ನಾೈಕ್ ಕಲ್ಲಗಂಡಿ, ಕಡಬ ಶ್ರೀ ಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಗಂಗಾಧರ ನಾೈಕ್, ಕಡಬ ಪರಿವಾರ ಬಂಟರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಉಂಡಿಲ, ಜಯನಾೈಕ್ ಕಲ್ಲಗಂಡಿ, ರಘುನಾಥ ನಾೈಕ್, ರಮೇಶ್ ಅಗ್ರಸಾಲೆ, ಕಾರ್ತಿಕ್ ಮಂಗಳೂರು, ನಿತೇಶ್ ಪಾಂಡಿ, ರಮೇಶ್ ನಾೈಕ್ ಕೊಠಾರಿ, ಚಿತ್ತರಂಜನ್ ನಾೈಕ್ ಕುದ್ಕೊಳಿ, ಪರಿವಾರ ಬಂಟರ ಸಂಘದ ಉಪಾಧ್ಯಕ್ಷ ರಾಮಯ್ಯ ನಾೈಕ್ ಕುದ್ಕೊಳಿ, ಸುಂದರ ನಾೈಕ್ ಕುಂಡಿಲು ಸೇರಿದಂತೆ ಪರಿವಾರ ಸಂಘದ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಕರಾಟೆ ಶಿಕ್ಷಕ ಯಾದವ್ ಬೀರಂತಡ್ಕ ಸ್ವಾಗತಿಸಿ, ಜಯನಂದ ಕೊಠಾರ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಿಶಿತಾ ಬೀರಂತಡ್ಕ ಸಹಕರಿಸಿದರು.

Also Read  ಈರುಳ್ಳಿ ಬೆಲೆ ಏರಿಕೆ, ಕಡಿಮೆ ಆಯ್ತು ಬಳಕೆ ➤ ಖರೀದಿಗೆ ಗ್ರಾಹಕರು ಹಿಂದೇಟು!

error: Content is protected !!
Scroll to Top