ಕೊೈಲ: ‘ನಮ್ಮ ರಸ್ತೆ – ನಮ್ಮ ಹಕ್ಕು’ ಸಮಿತಿ ರಚನೆ ► ಅಧ್ಯಕ್ಷರಾಗಿ ಯತೀಶ್ ಪುತ್ಯ, ಕಾರ್ಯದರ್ಶಿಯಾಗಿ ಮಹೇಶ್ ಆಯ್ಕೆ

(ನ್ಯೂಸ್ ಕಡಬ) newskadaba.com  ಕಡಬ, ಆ.01. ವಾಹನ ಸಂಚಾರಕ್ಕೆ ಮತ್ತು ನಡೆದಾಡಲೂ ಯೋಗ್ಯವಲ್ಲದ ರೀತಿಯಲ್ಲಿ ನಾದುರಸ್ಥಿ ಹೊಂದಿರುವ ಕೊೈಲ ಪಶು ಸಂಗೋಪನಾ ಇಲಾಖಾ ಅಧೀನದಲ್ಲಿರುವ ಸಾರ್ವಜನಿಕ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಮತ್ತು ರಸ್ತೆಯನ್ನು ಸಾರ್ವಜನಿಕ ಹಿತದೃಷ್ಠಿಯಿಂದ ಗ್ರಾಮ ಪಂಚಾಯಿತಿ ಸುಪರ್ದಿಗೆ ಬಿಟ್ಟು ಕೊಡಬೇಕು ಎಂಬ ಆಗ್ರಹ ಮತ್ತು ಹೋರಾಟದ ಉದ್ದೇಶದೊಂದಿಗೆ ರಚಿಸಲ್ಪಟ್ಟ ಕೊೈಲ “ನಮ್ಮ ರಸ್ತೆ ನಮ್ಮ ಹಕ್ಕು” ಸಮಿತಿಯ ಅಧ್ಯಕ್ಷರಾಗಿ ಯತೀಶ್ ಪುತ್ಯೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಪೊಸಲಕ್ಕೆ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ವೀರಪ್ಪ ದಾಸಯ್ಯ, , ಗೌರವ ಸಲಹೆಗಾರರು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ , ಉಪಾಧ್ಯಕ್ಷರಾಗಿ ಎ.ಕೆ. ಬಶೀರ್, ಕೀರ್ತನ್ ಶೆಟ್ಟಿ , ಜೊತೆಕಾರ್ಯದರ್ಶಿಯಾಗಿ ಕೊರಗಪ್ಪ , ಖಜಾಂಚಿಯಾಗಿ ಸೋಮನಾಥ ಗೌಡ, ಕಾರ್ಯಕಾರಿ ಸದಸ್ಯರುಗಳಾಗಿ ಹಮೀದ್ ಆತೂರು, ಬಿ.ಕೆ. ಚಂದ್ರಶೇಖರ ದಾಸಯ್ಯ, ಕೃಷ್ಣಪ್ಪ ಗೌಡ ಕಾಯರಟ್ಟ, ಬಿ.ಕೆ. ಮಹಮ್ಮದ್ ಕಲಾಯಿ, ಯಶೋಧರ, ದಿನೇಶ್, ನಾಗೇಶ್ ನೀಲಮೆ, ದೇವಯ್ಯ ಕಲ್ಕಾಡಿ, ಡಿ.ಟಿ. ಭಟ್, ಮೋನಪ್ಪ ನೂಜಿಮಾರು, ದಯಾನಂದ ಪಾಣಿಗ, ಸಂಜೀವ ಸುದೆಂಗಳ, ಹಮೀದ್ ಎಲ್ಯಂಗ, ರಮ್ಲ ಹಲ್ಯಾರ ಕಾನೂನು ಸಲಹೆಗಾರಾರಗಿ ರವಿಕಿರಣ್ , ಖಾಯಂ ಆಹ್ವಾನಿತರಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಿನೋಧರ ಮಾಳ, ಸುಧೀಶ್ ಪಟ್ಟೆ, ವಿಜಯಾ ಎಸ್. ಅಂಬಾ, ಬೀಫಾತುಮ್ಮ, ಸುಜಾತ ಶೆಟ್ಟಿ, ಕೆ.ಎ. ಸುಲೈಮಾನ್, ನಝೀರ್ ಪೂರಿಂಗ, ಲಲಿತಾ ಆಯ್ಕೆಯಾಗಿದ್ದಾರೆ.

Also Read  ಮಂಗಳೂರಿನ ಕಡಲಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸೂಟಿ ಶಿಯರ್ ವಾಟರ್ ಹಕ್ಕಿ ಪತ್ತೆ

error: Content is protected !!
Scroll to Top