ಪೆರಾಬೆ: ಕಿಡ್ನಿ ವೈಫಲ್ಯಕ್ಕೀಡಾಗಿ ಅವಿವಾಹಿತ ಮೃತ್ಯು

(ನ್ಯೂಸ್ ಕಡಬ) newskadaba.com ಆಲಂಕಾರು, ಜು.31. ಪೆರಾಬೆ ಗ್ರಾಮದ ಪೊಸೋಳಿಕೆ ದಿ.ಕೊರಗುರವರ ಪುತ್ರ ಆನಂದ (32ವ) ಸೋಮವಾರ ತಡರಾತ್ರಿ ಅಸೌಖ್ಯದಿಂದ ನಿಧನರಾದರು.

ಮೃತರು ಅವಿವಾಹಿತರಾಗಿದ್ದು ಹಲವು ವರ್ಷಗಳಿಂದ ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದರು. ನಾಲ್ಕು ವರ್ಷಗಳ ಹಿಂದೆ ಊರಿಗೆ ಮರಳಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಅವರು ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಸೋಮವಾರ ಡಯಾಲಿಸೀಸ್‍ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ನಿಧನರಾದರು. ಮೃತರು ತಾಯಿ ಇಬ್ಬರು ಸಹೋದರಿಯರನ್ನು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

Also Read  ದ .ಕ ಜಿ. ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ➤ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

error: Content is protected !!
Scroll to Top