(ನ್ಯೂಸ್ ಕಡಬ) newskadaba.com ಪುತ್ತೂರು, ಜು.31. ನಗರದಲ್ಲಿ ಹಲ್ಮೆಟ್ ಧರಿಸದೆ ಆಟೋ ಚಲಾಯಿಸಿದ್ದಾರೆಂಬ ಕಾರಣ ಹೇಳಿ ರಿಕ್ಷಾ ಚಾಲಕರೋರ್ವರಿಗೆ ದಂಡ ವಿಧಿಸಿದ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ನಡೆದಿದೆ.
ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ರಿಕ್ಷಾವೊಂದನ್ನು ತಪಾಸಣೆ ನಡೆಸಿದಾಗ ಅದರಲ್ಲಿ 9 ಮಂದಿ ವಿದ್ಯಾರ್ಥಿಗಳಿದ್ದ ಕಾರಣ ಮತ್ತು ಅದರೊಂದಿಗೆ ಹೆಲ್ಮೆಟ್ ರಹಿತ ಪ್ರಯಾಣ ಎಂದು ಸೇರಿಸಿದ ಪುತ್ತೂರು ಪೊಲೀಸರು ಒಟ್ಟು 700 ರೂ.ಗಳನ್ನು ದಂಡ ವಿಧಿಸಿದ್ದಾರೆ. ಪೋಲೀಸರು ನೀಡಿದ ಈ ನೋಟೀಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ಇನ್ಮುಂದೆ ಪುತ್ತೂರು ನಗರದಲ್ಲಿ ಅಟೋ ಚಲಾಯಿಸುವವರು ಸಮವಸ್ತ್ರ ಮಾತ್ರವಲ್ಲದೆ ಹೆಲ್ಮೆಟನ್ನೂ ಧರಿಸಬೇಕು ಎನ್ನುವ ಹೊಸ ನಿಯಮವೊಂದನ್ನು ಪುತ್ತೂರು ಪೊಲೀಸರು ರೂಪುಗೊಳಿಸಿದ್ದಾರೆಯೇ ಎನ್ನುವ ಗೊಂದಲ ಸಾರ್ವಜನಿಕ ವಲಯದಲ್ಲಿ ಉಂಟಾಗಿದೆ.