ಕಲ್ಲಡ್ಕ: ಅಕ್ರಮ ಗಾಂಜಾ ಸಾಗಾಟ ಪತ್ತೆ ► ಎರಡು ಕೆಜಿ ಗಾಂಜಾ ಸಹಿತ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.29. ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಡಿಸಿಐಬಿ ಪೊಲೀಸರು ಸುಮಾರು ಎರಡು ಕೆಜಿ ಗಾಂಜಾ ಸಹಿತ ಕಾರನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಲತಃ ಕೊಡಗು ನಿವಾಸಿ ಪ್ರಸ್ತುತ ಸೂರಿಕುಮೇರಿನಲ್ಲಿ ವಾಸವಾಗಿರುವ ಅಹಮ್ಮದ್‌ ಎಂಬವರ ಪುತ್ರ ಮಹಮ್ಮದ್‌ ಆಲೀಂ (36) ಎಂದ ಗುರುತಿಸಲಾಗಿದೆ. ಆರೋಪಿಯು ಭಾನುವಾರದಂದು ಕಲ್ಲಡ್ಕ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಓಮ್ನಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ವಾಹನ ತಪಾಸಣೆ ನಡೆಸಿದ ಡಿಸಿಐಬಿ ಪೊಲೀಸರ ತಂಡ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಗಾಡಿಯನ್ನು ಸ್ವಲ್ಪ ದೂರದಲ್ಲಿ  ನಿಲ್ಲಿಸಿ ಆತನು ಕಲ್ಲಡ್ಕ ಕಡೆಗೆ ಓಡಿಹೋಗಲು ಪ್ರಯತ್ನಿಸಿದ್ದು, ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಓಮ್ನಿ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದು, 2,33,550/- ರೂ. ಮೌಲ್ಯದ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ.

Also Read  ಕೈಮಗ್ಗ ಮತ್ತು ಜವಳಿ ಇಲಾಖೆ ➤ ಸಿದ್ಧ ಉಡುಪು ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ| ಬಿ.ಆರ್‌. ರವಿಕಾಂತೇ ಗೌಡರವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್‌ ಅಧಿಕ್ಷಕರಾದ ಸಜಿತ್‌ ರವರ ಸೂಚನೆಯಂತೆ ಡಿ.ಸಿ.ಐ.ಬಿ ಪೊಲೀಸ್‌ ನಿರೀಕ್ಷಕರಾದ ಸುನೀಲ್ ವೈ ನಾಯಕ್‌ರವರ ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಇಕ್ಬಾಲ್‌, ಉದಯ ರೈ, ಪ್ರವೀಣ್‌ ಎಂ, ತಾರಾನಾಥ್‌ ಎಸ್‌, ವಿಜಯ ಗೌಡ, ಶೋನ್‌ಶಾ ರವರು ಭಾಗವಹಿಸಿದ್ದಾರೆ.

error: Content is protected !!
Scroll to Top